- Thursday
- October 29th, 2026
ಸಿವಿಲ್ ಇಂಜಿನಿಯರ್ ಕೃಷ್ಣ ಸುಹಾಸ್ ಮಾಲಕತ್ವದ ಶಂಕರ ಬಿಲ್ಡ್ ಟೆಕ್ ನ ನೂತನ ಕಚೇರಿಯು ಸುಳ್ಯ ತಾಲೂಕು ಪಂಚಾಯತ್ ಎದುರಿನ ಕರೋಡಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು. ಕುಟುಂಬಸ್ಥರು, ಹಿರಿಯರು ಮತ್ತು ಬಂಧುಗಳ ಸಮ್ಮುಖದಲ್ಲಿ ಕೆ. ಗಣೇಶ ಶರ್ಮ, ಡಾ. ರಾಮ ಮೋಹನ್, ಎ.ಎಂ. ಭಟ್, ನಿವೃತ್ತ ಪ್ರಾಂಶುಪಾಲ ಕೆ. ಕೊಡೆಂಕಿರಿ ಬಾಲಕೃಷ್ಣ ಭಟ್ ಹಾಗೂ ಪುರೋಹಿತ...
ಸುಳ್ಯ: ಸುಳ್ಯ ದಸರಾ ಶೋಭಾಯಾತ್ರೆಯಲ್ಲಿ ಕಳೆದ ಹಲವು ವರ್ಷಗಳಿಂದ ಗಜಕೇಸರಿ ನಡುಬೈಲು, ಡಿಜೆ ಫ್ರೆಂಡ್ಸ್ ಸುಳ್ಯ, ಕಾರ್ಗಿಲ್ ಬಾಯ್ಸ್ ಜಟ್ಟಿಪಳ್ಳ, ಜಟಾಯು ಫ್ರೆಂಡ್ಸ್ ಸುಳ್ಯ, ಜನನಿ ಫ್ರೆಂಡ್ಸ್ ಕ್ಲಬ್ ಗುಂಡ್ಯ ಅಲೆಟ್ಟಿ ಹಾಗೂ ಆಗಸ್ತ್ಯ ವಿಷ್ಣು ಸರ್ಕಲ್ ಸುಳ್ಯ ಇವರ ನೇತೃತ್ವದ ಸ್ತಬ್ದಚಿತ್ರಗಳು ಜನರನ್ನು ಆಕರ್ಷಿಸಿತ್ತು. ಆದರೇ ಈ ವರ್ಷದ ಶೋಭಾಯಾತ್ರೆಯಲ್ಲಿ ಸ್ತಬ್ಧಚಿತ್ರ ಪ್ರದರ್ಶನ ನೀಡದಿರಲು...
ಸುಳ್ಯ : ಮೆಸ್ಕಾಂ ಸುಳ್ಯ ಉಪವಿಭಾಗದ ಅರಂತೋಡು ಶಾಖೆಯಲ್ಲಿ ಪವರ್‌ಮೆನ್‌ಗಳ ಕೊರತೆಯಿಂದ ಸಂಪಾಜೆ, ಗೂನಡ್ಕ, ಕಲ್ಲುಗುಂಡಿ, ಅರಂತೋಡು ಹಾಗೂ ಮರ್ಕಂಜ ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ, ಹೆಚ್ಚುವರಿಯಾಗಿ ಐದು ಗುತ್ತಿಗೆ ಆಧಾರಿತ ಗ್ಯಾಂಗ್‌ಮೆನ್‌ಗಳ ಸೇವೆಯನ್ನು ಪಡೆಯಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ. ಅರಂತೋಡು ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪವರ್‌ಮೆನ್‌ಗಳು ವರ್ಗಾವಣೆಗೊಂಡಿದ್ದು, ಹೊಸದಾಗಿ ನೇಮಕಾತಿ ಆಗದಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ...
ಸುಳ್ಯ: ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರುಗಳ ನಿರ್ವಹಣಾ ಕಾಮಗಾರಿಯನ್ನು ಅಕ್ಟೋಬರ್ 27ರ ಮಂಗಳವಾರ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸುಳ್ಯ-1 ಕೇರ್ಪಳ, ಸುಳ್ಯ-2 ಶ್ರೀರಾಂಪೇಟೆ, ಜಬಳೆ, ಡಿಪೋ, ತೊಡಿಕಾನ, ಕೋಲ್ಚಾರ್, ದೇವರಗುಂಡ, ಅಜ್ಜಾವರ, ಉಬರಡ್ಕ, ಕಲ್ಲುಗುಂಡಿ ಹಾಗೂ ಮಂಡೆಕೋಲು ಫೀಡರುಗಳ ವ್ಯಾಪ್ತಿಯಲ್ಲಿ...
ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ದಿನಾಂಕ : 22 ಅಕ್ಟೋಬರ್ 2026ವಾರ : ಗುರುವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಅಕ್ಟೋಬರ್ 22) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು...
ಈ ಕಾರ್ಯಾಗಾರದಲ್ಲಿ SSLC ಪರೀಕ್ಷೆಯಲ್ಲಿ ಶೇ.96 ಮತ್ತು ಕಳೆದ ವರ್ಷ 2nd PUC{PCMB} ಪರೀಕ್ಷೆಯಲ್ಲಿ ಶೇ. 97 ಅಂಕಗಳನ್ನು ಗಳಿಸಿದ ಪ್ರಲೋಜ್ಞ ಪೀರನಮನೆ ಯವರು ತಾನು ಅನುಸರಿಸಿದ ಉತ್ತಮ ಫಲಿತಾಂಶ ಪಡೆಯಲು ಸಹಾಯಕವಾದ ಓದುವ ಕ್ರಮ, ಪುನರಾವರ್ತನೆ, ಸಮಯದ ಸದ್ಬಳಕೆ, ಶಿಸ್ತು ಮತ್ತು ಗುರಿ ನಿಗದಿಯ ಕುರಿತು ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ.ಕಾರ್ಯಗಾರದಲ್ಲಿ ಪೋಷಕರಿಗೂ ಭಾಗವಹಿಸಲು...
ಬೆಳ್ಳಾರೆ : ಝಕರಿಯಾ ಜುಮ್ಮಾ ಮಸೀದಿ ಬೆಳ್ಳಾರೆಯ ಮಹಾಸಭೆಯು ಅಧ್ಯಕ್ಷರಾದ ಯು.ಎಚ್ ಅಬೂಬಕ್ಕರ್ ಮಂಗಳ ರವರ ಅಧ್ಯಕ್ಷತೆಯಲ್ಲಿ ಮಹಲ್ ಖತೀಬರಾದ ನಸೀಹ್ ದಾರಿಮಿ ಯವರ ದುಆ ನೆರವೇರಿಸಿ ವಕ್ಫ್ ವೀಕ್ಷಕರಾದ ದ.ಕ ಜಿಲ್ಲಾ ವಕ್ಫ್ ಅಧಿಕಾರಿ ಮುಸ್ತಫಾ ಮತ್ತು ಮಾಜಿ ಅಧಿಕಾರಿ ಅಬೂಬಕ್ಕರ್ ಉಪಸ್ತಿತಿಯೊಂದಿಗೆ ಹಿದಾಯ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ 2026–2029ನೇ ಸಾಲಿನ ನೂತನ...
ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ಘೋಷಿಸಲಾಗಿದ್ದ ದಸರಾ ರಜೆಯನ್ನು ಒಂದು ದಿನ ವಿಸ್ತರಿಸಿ ಅಕ್ಟೋಬರ್ 22ರವರೆಗೆ ಮುಂದುವರಿಸಲಾಗಿದೆ. ಅಕ್ಟೋಬರ್ 21ರಂದು ಐತಿಹಾಸಿಕ ದಸರಾ ಹಬ್ಬದ ಪೂಜೆ ಹಾಗೂ ಮೆರವಣಿಗೆಯ ಅಂತಿಮ ದಿನವಾಗಿದ್ದು, ರಾತ್ರಿ ವೇಳೆ ನಡೆಯುವ ಕಾರ್ಯಕ್ರಮಗಳಲ್ಲಿ ಅಪಾರ ಸಂಖ್ಯೆಯ ಮಕ್ಕಳು ಹಾಗೂ ಪೋಷಕರು ಭಾಗವಹಿಸುತ್ತಾರೆ. ಅಲ್ಲದೆ, ದೂರದ ಜಿಲ್ಲೆಗಳಿಗೆ ತೆರಳಿರುವ ಮಕ್ಕಳು ಹಾಗೂ ಪೋಷಕರು...
ಸುಬ್ರಹ್ಮಣ್ಯ ಅ.21 : ಇತ್ತೀಚೆಗೆ ಸೈಕಲ್ ನಲ್ಲಿ ಹೋಗುತ್ತಿದ್ದಾಗ ಕಾಲು ಸಂಕದಿಂದ ಕೆಳಗೆ ಬಿದ್ದು ಸೊಂಟ ಮುರಿತಕ್ಕೊಳಗಾಗಿ ವೀಲ್ ಚೇರ್ ನಲ್ಲಿ ನಡೆದಾಡುವ ಸಾಯಿ ದರ್ಶನ್ ಅವರಿಗೆ ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಸಹಾಯಧನ ಬುಧವಾರ ಹಸ್ತಾಂತರಿಸಲಾಯಿತು. ಬಿಲದ್ವಾರದ ಸಮೀಪ ಇರುವ ಅವರ ಬಾಡಿಗೆ ಮನೆಗೆ ತೆರಳಿ ಅವರ ತಂದೆ ತಾಯಿಯ ಸಮ್ಮುಖದಲ್ಲಿ ಸುಬ್ರಹ್ಮಣ್ಯ ರೋಟರಿ...
ಮಹಿಳೆಯರು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಹೊಲಿಗೆ ತರಬೇತಿ ಸಹಕಾರಿ: ರಾಮಕೃಷ್ಣ ಮಲ್ಲಾರ ಸುಬ್ರಹ್ಮಣ್ಯ: ರೈತ ಯುವಕಮಂಡಲ ಚಾರಿಟೇಬಲ್ ಟ್ರಸ್ಟ್ ಹಾಗೂ ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ಸಹಯೋಗದಲ್ಲಿ ಆರು ತಿಂಗಳ ಕಾಲ ನಡೆದ ಉಚಿತ ಹೊಲಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಅ.20ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್‌ನ ಅಧ್ಯಕ್ಷ ರಾಮಕೃಷ್ಣ ಮಲ್ಲಾರ ವಹಿಸಿದ್ದರು. ಮುಖ್ಯ...
Loading posts...
All posts loaded
No more posts
