- Wednesday
- September 9th, 2026
ಜಾಲ್ಸೂರು ಸಮೀಪದ ಮಹಾಬಲಡ್ಕ ಬಳಿ ಇದೀಗ (ಜು. 6) ರಸ್ತೆ ಮೇಲೆ ಮರ ಬಿದ್ದ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡ ಘಟನೆ ನಡೆದಿದೆ. ಮರ ರಸ್ತೆ ಮಧ್ಯೆ ಬಿದ್ದಿದ್ದರಿಂದ ಎರಡೂ ದಿಕ್ಕಿನ ವಾಹನಗಳು ಸಾಲುಗಟ್ಟಿ ನಿಂತು ಸಂಚಾರಕ್ಕೆ ಅಡಚಣೆ ಉಂಟಾಯಿತು. ಬಳಿಕ ಸ್ಥಳೀಯರು ಹಾಗೂ ಸಂಬಂಧಪಟ್ಟ ಸಿಬ್ಬಂದಿ ಮರವನ್ನು ತೆರವುಗೊಳಿಸುವ ಕಾರ್ಯ ಕೈಗೊಂಡಿದ್ದು, ವಾಹನ ಸಂಚಾರವನ್ನು...
ಆಯುರ್ವೇದ ವೈದ್ಯಕೀಯ ಸ್ನಾತಕೋತರ ಪದವಿ ಪರೀಕ್ಷೆಯಲ್ಲಿ ಯೋಗ ಮತ್ತು ಸ್ವಸ್ತ ವಿಭಾಗದಲ್ಲಿ ರಾಜ್ಯದಲ್ಲಿ ಪ್ರಥಮ ರ‍್ಯಾಂಕ್ ಚಿನ್ನದ ಪದಕ ಪಡೆದ ಡಾ. ಹಿತಾ ಮಡ್ತಿಲ ಇವರಿಗೆ ಐವರ್ನಾಡು ಭಾರತೀಯ ಜನತಾ ಪಕ್ಷದ ಶಕ್ತಿ ಕೇಂದ್ರ ವತಿಯಿಂದ ಅವರ ಮನೆಯಲ್ಲಿ ಸನ್ಮಾನಿಸಲಾಯಿತು. ಸನ್ಮಾನವನ್ನು ಶ್ರೀಮತಿ ರೇವತಿ ಭೋಳುಗುಡ್ಡೆ ಮತ್ತು ಶ್ರೀಮತಿ ಭಾರತಿ ಗುತ್ತಿಗಾರು ಮೂಲೆ ನೆರವೇರಿಸಿದರು. ಈ...
ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಐವರ್ನಾಡು-ಕುಕ್ಕುಡೇಲು ಸಂಪರ್ಕ ಸಾರ್ವಜನಿಕ ರಸ್ತೆಯ 2 ಬದಿಯ ಬರೆ(ಗುಡ್ಡ) ನಿರಂತರವಾಗಿ ಕುಸಿಯುತ್ತಿರುವುದರಿಂದ ಆ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಐವರ್ನಾಡು ಗ್ರಾಮ ಪಂಚಾಯತ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜು. 4ರಂದು ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜು, ಸುಳ್ಯ ಇದರ ವತಿಯಿಂದ ನಡೆಸಿದ Kambala Solution ಕಂಪೆನಿಯ ಸಂದರ್ಶನದಲ್ಲಿ 2026ನೇ ಸಾಲಿನ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಯತೀಶ ಯು., ಸೃಜನ ಕುಮಾರ, ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ (ಆರ್‌ಟಿಫಿಶಿಯಲ್ ಇಂಟೆಲಿಜೆನ್ಸ್ & ಮೆಶಿನ್ ಲರ್ನಿಂಗ್) ವಿಭಾಗದ ವಿದ್ಯಾರ್ಥಿ ಬಬಿತ್ ಪಿ.ಎಸ್., ಸೋನಾ, ಸಂಜನಾ...
ಸುಳ್ಯ ತಾಲೂಕು ಮಟ್ಟದ ಪ. ಜಾತಿ, ಪಂಗಡದವರ ಕುಂದುಕೊರತೆ ಸಮಿತಿಯ ಸಭೆಯನ್ನು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸುಳ್ಯ ತಹಶೀಲ್ದಾರ್ ಕು. ಮಂಜುಳರವರ ಅಧ್ಯಕ್ಷತೆಯಲ್ಲಿ ಜು. 8ರಂದು ಕರೆಯಲಾಗಿದೆ. ಸಂಬಂಧಪಟ್ಟ ಪ.ಜಾತಿ, ಪಂಗಡದವರು ತಮ್ಮ ಸಮಸ್ಯೆಗಳ ಬಗ್ಗೆ 3 ದಿನ ಮುಂಚಿತವಾಗಿ ಸುಳ್ಯ ಸಮಾಜ ಕಲ್ಯಾಣ ಇಲಾಖಾ ಕಛೇರಿಗೆ ಲಿಖಿತ ರೂಪದಲ್ಲಿ ಮನವಿಗಳನ್ನು ಸಲ್ಲಿಸಲು ತಿಳಿಸಲಾಗಿದೆ....
ಬೆಳ್ಳಾರೆ ಗ್ರಾಮದ ಬೂಡು ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿಯ ವಠಾರದಲ್ಲಿ ಬೆಳ್ಳಾರೆ ಪೊಲೀಸ್ ಠಾಣೆ ವತಿಯಿಂದ ಎಸ್. ಸಿ, ಎಸ್. ಟಿ. ಕುಂದು ಕೊರತೆ ಸಭೆ ಜು. 4ರಂದು ನಡೆಯಿತು.ಬೆಳ್ಳಾರೆ ಠಾಣೆಯ ಎ.ಎಸ್.ಐ. ಕುಂಞ ಅವರು ಅಹವಾಲು ಆಲಿಸಿದರು. ಅವರು ಅಮಲು ಪದಾರ್ಥ ಸೇವನೆ ವಿರುದ್ಧ ಕೇಸಿನ ಟೆನ್-51,ಅಮಲು ಪದಾರ್ಥ ಸೇವಿಸುವವರನ್ನು ಸರಿದಾರಿಗೆ ತರುವ ಟೆನ್-52,...
ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು ದಿನನಿತ್ಯವೂ ಕೂಡ “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪ್ರಮುಖ ಕೃಷಿ ಉತ್ಪನ್ನಗಳ ಪ್ರತಿದಿನದ ಮಾರುಕಟ್ಟೆ ಧಾರಣೆಯ ವಿವರಗಳನ್ನು ಪಡೆದುಕೊಂಡು ನಮ್ಮ “ಅಮರ ಸುಳ್ಯ ಸುದ್ದಿ ವಾರಪತ್ರಿಕೆ”ಯ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತಾ ಬರುತ್ತಿದ್ದೇವೆ. ಈ ವಾರ ಅಂದರೆ ಜೂನ್ 29 ಸೋಮವಾರದಿಂದ ಜುಲೈ 04...
ಸುಳ್ಯ, ಜು. 4: ರಾಷ್ಟ್ರಾದ್ಯಂತ ಜು. 11ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ನ್ಯಾಯಾಲಯಗಳಲ್ಲಿ ಬಾಕಿ ಇರುವ ಹಾಗೂ ವ್ಯಾಜ್ಯ ಪೂರ್ವ ಹಂತದಲ್ಲಿರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಶೀಘ್ರವಾಗಿ ಇತ್ಯರ್ಥಗೊಳಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸುಳ್ಯ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆ ದಮಯಂತಿ ಸೋಮಯ್ಯ ತಿಳಿಸಿದರು. ಅವರು...
ಸುಬ್ರಹ್ಮಣ್ಯ ಜುಲೈ 04: ಕರ್ನಾಟಕ ಸರಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ಕಡಬ ತಾಲೂಕು ಪಂಚಾಯತ್ ಹಾಗೂ ಮಹಾತ್ಮ ಗಾಂಧಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಸುಬ್ರಹ್ಮಣ್ಯದ ಕಾಶಿಕಟ್ಟೆಯಿಂದ ಮುಖ್ಯ ರಸ್ತೆಯಾಗಿ ಕುಮಾರಧಾರ, ಕುಲ್ಕುಂದ, ವೆಂಕಟಪುರದವರೆಗೆ ಬೃಹತ್ ಹೆದ್ದಾರಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು...
ಬಾಳಿಲ ವಿದ್ಯಾಬೋಧಿನೀ ವಿದ್ಯಾ ಸಂಸ್ಥೆಗಳ ಆಶ್ರಯದಲ್ಲಿ ಜುಲೈ 01 ರಂದು 'ಮಾದಕ ದ್ರವ್ಯಗಳ ಬಳಕೆ ವಿರುದ್ಧ ಅರಿವು' ಕಾರ್ಯಕ್ರಮವು ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು. ಮಾದಕ ದ್ರವ್ಯ ಎಂದರೇನು? ಅದರ ದುಷ್ಪರಿಣಾಮವೇನು? ತಡೆಗಟ್ಟುವ ವಿಧಾನಗಳಾವುವು? ಹಾಗೂ ಇತರ ಮಾಹಿತಿಯನ್ನು ಗಣೇಶ ಪ್ರಸಾದ್, ಪ್ರೊಬೆಶನರಿ ಪಿಎಸ್ಐ ಪೊಲೀಸ್ ಸ್ಟೇಷನ್ ಬೆಳ್ಳಾರೆ ಇವರು ನೀಡಿದರು. ಈ ಸಂದರ್ಭದಲ್ಲಿ ಪೊಲೀಸ್ ಸ್ಟೇಷನ್...
Loading posts...
All posts loaded
No more posts
