ಸುಳ್ಯದಲ್ಲಿ ಅ.27ರಂದು ಸಿಂಧೂರ ಶೋರೂಂನಲ್ಲಿ ಬಿಗ್ ಫೆಸ್ಟಿವಲ್ ಸೇಲ್ – ಖ್ಯಾತ ಹಾಸ್ಯ ನಟರಾದ ದೇವದಾಸ್ ಕಾಪಿಕಾಡ್, ಭೋಜರಾಜ್ ವಾಮಂಜೂರು ಸಹಿತ ಕಲಾವಿದರ ಭೇಟಿ

ಸುಳ್ಯದ ಸಿಂಧೂರ ಶೋರೂಂನಲ್ಲಿ ಬಿಗ್ ಫೆಸ್ಟಿವಲ್ ಸೇಲ್ ಅಂಗವಾಗಿ ಅಕ್ಟೋಬರ್ 27ರಂದು ಮಂಗಳವಾರ ವಿಶೇಷ ಕಾರ್ಯಕ್ರಮ ನಡೆಯಲಿದೆ.

. . . . . . . . .

ಭಾರತದಲ್ಲೇ ಅತೀ ಕಡಿಮೆ ಬೆಲೆಗೆ ಬಟ್ಟೆಗಳು ದೊರೆಯುವ ಏಕೈಕ ಮಳಿಗೆ ಎಂಬ ಗ್ರಾಹಕರನ್ನು ಆಕರ್ಷಿಸುತ್ತಿರುವ ಸಿಂಧೂರ ಶೋರೂಂಗೆ ತುಳುನಾಡಿನ ಖ್ಯಾತ ನಟರಾದ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್, ನವರಸ ರಾಜ ಭೋಜರಾಜ್ ವಾಮಂಜೂರು, ಹಾಸ್ಯ ನಟ ಸಾಯಿಕೃಷ್ಣ ಹಾಗೂ ಸುಪ್ರಂ ಸೋ ಖ್ಯಾತಿಯ ಹಾಸ್ಯ ನಟ ಶಿವು ಅಳಿಕೆ ಆಗಮಿಸಲಿದ್ದಾರೆ.

. . . . . . .

ಗ್ರಾಹಕರಿಗೆ ವಿಶೇಷ ಕೊಡುಗೆಗಳು

ಫೆಸ್ಟಿವಲ್ ಸೇಲ್ ಪ್ರಯುಕ್ತ ರೂ.499ಕ್ಕಿಂತ ಹೆಚ್ಚಿನ ಖರೀದಿಗೆ ಸ್ಕ್ರಾಚ್ ಕಾರ್ಡ್ ಹಾಗೂ ಲಕ್ಕಿ ಕೂಪನ್ ಪಡೆಯುವ ಅವಕಾಶವಿದ್ದು, ರೂ.10,000ದವರೆಗೆ ಕ್ಯಾಶ್‌ಬ್ಯಾಕ್ ಗೆಲ್ಲುವ ಅವಕಾಶವೂ ಇದೆ. ಬಂಪರ್ ಬಹುಮಾನ, ಡೈಲಿ ಡ್ರಾ ಹಾಗೂ ಆಯ್ದ ಕೊಡುಗೆಗಳೂ ಗ್ರಾಹಕರಿಗಾಗಿ ಇರಲಿವೆ.

ಸೀರೆ, ಶರ್ಟ್, ಟಾಪ್ಸ್ ಸೇರಿದಂತೆ ವಿವಿಧ ಬಗೆಯ ಉಡುಪುಗಳು, ರೇಷ್ಮೆ ವಸ್ತ್ರಗಳು, ರೆಡಿಮೇಡ್ ಬಟ್ಟೆಗಳು ಹಾಗೂ ಮದುವೆ ಸಮಾರಂಭಗಳ ವಿಶೇಷ ಕಲೆಕ್ಷನ್‌ಗಳು ಇಲ್ಲಿ ಲಭ್ಯವಿವೆ. ಕುಟುಂಬದ ಎಲ್ಲ ಸದಸ್ಯರಿಗೂ ಅಗತ್ಯವಿರುವ ಉಡುಪುಗಳನ್ನು ಒಂದೇ ಸೂರಿನಡಿ ಒದಗಿಸುವ ಸಂಪೂರ್ಣ ಫ್ಯಾಮಿಲಿ ಶೋರೂಂ ಆಗಿ ಸಿಂಧೂರ ಗುರುತಿಸಿಕೊಂಡಿದೆ.

ಮೊದಲು ಆಗಮಿಸುವ 300 ಗ್ರಾಹಕರಿಗೆ ಮಾತ್ರ ವಿಶೇಷ ಕೊಡುಗೆಗಳು ಲಭ್ಯವಿರಲಿದ್ದು, ಕೇವಲ 1 ರೂ ಗೆ ಸಾರಿ, ಶರ್ಟ್, ಟಾಪ್ ಪಡೆಯಬಹುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading