ಸುಳ್ಯ ದಸರಾ: ಅ.24ರಂದು ವಾಹನ ಸಂಚಾರ ಮಾರ್ಗ ಬದಲಾವಣೆ | ಜ್ಯೋತಿ ಸರ್ಕಲ್‌ನಿಂದ ಗಾಂಧಿನಗರದವರೆಗೆ ಪಾರ್ಕಿಂಗ್ ನಿಷೇಧ

ಸುಳ್ಯ: ಸುಳ್ಯ ದಸರಾ-2026ರ ಅಂಗವಾಗಿ ಅ.24ರಂದು ಶ್ರೀ ಶಾರದಾಂಬೆಯ ಶೋಭಾಯಾತ್ರೆ ನಡೆಯಲಿರುವ ಹಿನ್ನೆಲೆಯಲ್ಲಿ ಸುಳ್ಯ ಪೇಟೆಯಲ್ಲಿ ವಾಹನ ಸಂಚಾರಕ್ಕೆ ಮಾರ್ಗ ಬದಲಾವಣೆ ಮಾಡಲಾಗಿದೆ. ಅಂದು ಶ್ರೀ ಚೆನ್ನಕೇಶವ ದೇವಸ್ಥಾನದಿಂದ ಆರಂಭವಾಗುವ ಶೋಭಾಯಾತ್ರೆಯು ಸುಳ್ಯ ಪೇಟೆಯಲ್ಲಿ ಸಾಗಲಿರುವುದರಿಂದ, ಸುಳ್ಯ ಪೇಟೆಯ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ವಾಹನ ಸಂಚಾರವನ್ನು ನಿಷೇಧಿಸಿ ಬದಲಿ ಮಾರ್ಗದಲ್ಲಿ ಸಂಚರಿಸಲು ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಲಿದ್ದಾರೆ.

. . . . . . . . .

ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗ

. . . . . . .

ಮೈಸೂರು ಹಾಗೂ ಮಡಿಕೇರಿ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ವಾಹನಗಳು ಗಾಂಧಿನಗರದ ಪೊಲೀಸ್ ಠಾಣೆ ಮುಂಭಾಗದ ಕಟ್ಟೆ ಜಂಕ್ಷನ್‌ನಲ್ಲಿ ಎಡಕ್ಕೆ ತಿರುಗಿ ವಿವೇಕಾನಂದ ಸರ್ಕಲ್–ಅಜ್ಜಾವರ–ಪೆರಾಲ ಮಾರ್ಗವಾಗಿ ಅಡ್ಕಾರು ಬಳಿ ರಾಷ್ಟ್ರೀಯ ಹೆದ್ದಾರಿ 275ನ್ನು ಸಂಪರ್ಕಿಸಿ ಮುಂದುವರಿಯಬೇಕು.

ಮಂಗಳೂರು ಕಡೆಯಿಂದ ಸುಳ್ಯ, ಕಲ್ಲುಗುಂಡಿ ಹಾಗೂ ಮಡಿಕೇರಿ ಕಡೆಗೆ ತೆರಳುವ ವಾಹನಗಳು ಪೈಚಾರು ಎಂಬಲ್ಲಿ ಎಡಕ್ಕೆ ತಿರುಗಿ ಸೋಣಗೇರಿ–ಕಂದಡ್ಕ ಮಾರ್ಗವಾಗಿ ಉಬರಡ್ಕ ಕ್ರಾಸ್‌ನ ಕೆಎಸ್‌ಆರ್‌ಟಿಸಿ ಡಿಪೋ ರಸ್ತೆಯ ಮೂಲಕ ಪರಿವಾರ ಖಾನ್ ಬಳಿ ರಾಷ್ಟ್ರೀಯ ಹೆದ್ದಾರಿ 275ನ್ನು ಸಂಪರ್ಕಿಸಿ ಸಂಚರಿಸಬೇಕು.

ರಸ್ತೆ ಬದಿಯಲ್ಲಿ ಪಾರ್ಕಿಂಗ್ ನಿಷೇಧ
ಪಟ್ಟಣ ಪಂಚಾಯತ್ ಕಾರ್ಯಾಲಯದ ಸೂಚನೆಯಂತೆ ಸುಳ್ಯ ಪೇಟೆಯ ರಾಷ್ಟ್ರೀಯ ಹೆದ್ದಾರಿ 275ರ ಜ್ಯೋತಿ ಸರ್ಕಲ್‌ನಿಂದ ಗಾಂಧಿನಗರದವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ಪಾರ್ಕಿಂಗ್ ನಿಷೇಧಿಸಲಾಗಿದೆ.

ವಾಹನ ನಿಲುಗಡೆಗೆ ಪರ್ಯಾಯ ವ್ಯವಸ್ಥೆ
ದಸರಾ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರ ವಾಹನಗಳ ನಿಲುಗಡೆಗಾಗಿ ಗಾಂಧಿನಗರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣ, ಪ್ರಭು ಗ್ರೌಂಡ್, ದೇವಸ್ಥಾನದ ಬಳಿಯ ಜಾಯಿಂಟ್ ವಿಲ್ ಗ್ರೌಂಡ್, ಎಪಿಎಂಸಿ ಗ್ರೌಂಡ್ ಹಾಗೂ ಜೂನಿಯರ್ ಕಾಲೇಜು ಆವರಣದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಿ, ನಿಗದಿಪಡಿಸಿದ ಪಾರ್ಕಿಂಗ್ ಸ್ಥಳಗಳನ್ನು ಬಳಸುವ ಮೂಲಕ ಸುಳ್ಯ ದಸರಾ ಶೋಭಾಯಾತ್ರೆಯ ಸುಗಮ ಸಂಚಾರಕ್ಕೆ ಸಹಕರಿಸುವಂತೆ ಸೂಚಿಸಲಾಗಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading