ಸೆ.27ರಿಂದ ಸುಳ್ಯ–ಮಡಪ್ಪಾಡಿ–ಗುತ್ತಿಗಾರು ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಪುನರಾರಂಭ

ಸುಳ್ಯ: ಗ್ರಾಮಸ್ಥರ ಬೇಡಿಕೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಹಿಂದೆ ಸಂಚರಿಸುತ್ತಿದ್ದ ಸುಳ್ಯ–ಮಡಪ್ಪಾಡಿ–ಗುತ್ತಿಗಾರು ಕೆಎಸ್‌ಆರ್‌ಟಿಸಿ ಬಸ್ ಸೇವೆಯನ್ನು ಸೆ.27ರಿಂದ ಪುನರಾರಂಭಿಸಲಾಗುತ್ತಿದೆ.ಸೆ.27ರಂದು ಮಧ್ಯಾಹ್ನ 2.15ಕ್ಕೆ ಸುಳ್ಯದಿಂದ ಹೊರಡುವ ಬಸ್ 3 ಗಂಟೆಗೆ ಮಡಪ್ಪಾಡಿ ತಲುಪಲಿದೆ. ಈ ಬಸ್ ಸೇವೆಯ ಪುನರಾರಂಭದಿಂದ ಮಡಪ್ಪಾಡಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಅನುಕೂಲವಾಗಲಿದೆ.ಗ್ರಾಮಸ್ಥರು ಹಾಗೂ ಸಾರ್ವಜನಿಕರು ಬಸ್ ಸೇವೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಂಡು ವ್ಯವಸ್ಥೆಯ ಸದುಪಯೋಗಪಡಿಸಿಕೊಳ್ಳುವಂತೆ ಮಡಪ್ಪಾಡಿ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಿನಯಕುಮಾರ್ ಮುಳುಗಾಡು ಮನವಿ ಮಾಡಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading