ಜನಜಾಗೃತಿ ಮೂಡಿಸುವ ಉದ್ದೇಶದಿಂದ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ “ರೈತ ಧಾರ್ಮಿಕ ಚಳುವಳಿ”

ಸುಬ್ರಹ್ಮಣ್ಯ ಸೆಪ್ಟೆಂಬರ್ 26 : “ಕಸ್ತೂರಿ ರಂಗನ್ ವರದಿ ಇಂದ ಗ್ರಾಮೀಣ ರೈತರ ಮತ್ತು ಇತರ ಪ್ರದೇಶಗಳಲ್ಲಿರುವ ಧಾರ್ಮಿಕ ಕ್ಷೇತ್ರಗಳ ಮೇಲೆ ಪರಿಣಾಮ ಬೀರುವ ಸಲುವಾಗಿ ಪರಿಸರ ಸಂರಕ್ಷಣೆ ಎಂಬ ಹೆಸರಿನಲ್ಲಿ ಗ್ರಾಮೀಣ ರೈತರ ಬದುಕೇ ಬೀದಿ ಪಾಲು ಆಗುವುದರಿಂದ ಆ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ರೈತ ಧಾರ್ಮಿಕ ಚಳವಳಿಯು ಸೆ.26 ರಿಂದ ಜೂ.1ರ ತನಕ ನಡೆಯಲಿರುವುದು” ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ತಿಳಿಸಿದ್ದಾರೆ. ಕಸ್ತೂರಿ ರಂಗನ್ ಸೂಕ್ಷ್ಮ ವಲಯ ವರದಿ ವಿರೋಧಿಸಿ ಹೋರಾಟಕ್ಕೆ ಜಯ ಸಿಗುವಂತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಲ್ಲಿ ಪ್ರಾರ್ಥನೆ ಮಾಡಿ ಹೊರಬಂದು ಸುಬ್ರಹ್ಮಣ್ಯದಲ್ಲಿ ನಡೆದ ರೈತರ ಸಭೆಯಲ್ಲಿ ಅವರು ಮಾತನಾಡಿದರು. “ಪುಣ್ಯಕ್ಷೇತ್ರಗಳು, ಗ್ರಾಮೀಣ ಭಾಗದಲ್ಲಿರುವ ದೇವಸ್ಥಾನ, ಚಾವಡಿ ಜಾಗಗಳು, ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದ ಸ್ಥಳಗಳು, ಪುರಾತನ ಕಾಲದಿಂದಲೂ ಕಾಡಿನ ಮಧ್ಯೆ ಇರುವ ಪ್ರಸಿದ್ಧ ಶ್ರದ್ಧಾ ಕೇಂದ್ರಗಳ ಜಾಗಗಳಿಗೆ ತೊಂದರೆಯಾಗುವ ಆತಂಕ ಎದುರಾಗಿದೆ. ಈ ಎಲ್ಲ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಿ ಪರಿಹಾರಕ್ಕಾಗಿ ರೈತ ಧಾರ್ಮಿಕ ಚಳವಳಿ ನಡೆಸಲಾಗುವುದು” ಎಂದು ಹೇಳಿದರು.

. . . . . . . . .

ಸಭೆಯಲ್ಲಿ ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ಸದಸ್ಯರುಗಳಾದ ಜಯಪ್ರಕಾಶ್ ಕೂಜುಗೋಡು, ಅಚ್ಚುತ ಗೌಡ ಸುಬ್ರಹ್ಮಣ್ಯ, ರಮಾನಂದ ಎಣ್ಣೆಮಜಲು, ದಾಮೋದರ ಗುಂಡ್ಯ, ಅಶೋಕ್ ಕುಮಾರ್ ಮೂಲೆಮಜಲು, ಲಕ್ಷ್ಮೀಶ ಇಜಿನಡ್ಕ, ಶ್ರೀಕುಮಾರ್ ಬಿಲದ್ವಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading