ಪಂಜ : ಶಿವ ಸ್ಮರಣೆ ಅಂಗವಾಗಿ ಸೆ.18 ರಂದು ದೇವರಿಗೆ ಶತರುದ್ರಾಭಿಷೇಕ

ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸೆ.07 ರಿಂದ ನಿರಂತರವಾಗಿ ಭಕ್ತಾಧಿಗಳಿಂದ ನಡೆಯುತ್ತಿರುವ ಶಿವ ಸ್ಮರಣೆ ಕಾರ್ಯಕ್ರಮ ಸೆ.18 ರಂದು 12 ನೇ ದಿನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅಂದು ದೇವರಿಗೆ ಶತರುದ್ರಾಭಿಷೇಕ ಸೇವೆ ನಡೆಯಲಿದೆ.

. . . . . . . . .

ಸೀಮೆಯ ಭಕ್ತರ ಒಳಿತಿಗಾಗಿ ಹಾಗೂ ಸಾನಿಧ್ಯ ವೃದ್ಧಿಗಾಗಿ ಹಾಗೂ ಸಾವಿರ ಸೀಮೆಯ ಭಕ್ತರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಸತತ 12 ದಿನಗಳ ಕಾಲ ಶಿವ ಸ್ಮರಣೆ ನಡೆಯುತ್ತಾ ಬಂದಿದೆ. ಸೆ.18 ರಂದು ಶತರುದ್ರಾಭಿಷೇಕ ಸೇವೆ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ, ಹಾಗೂ 1200 ಕ್ಕೂ ಮಿಕ್ಕಿ ಸೀಯಾಳ ಅವಶ್ಯಕತೆಯಿರುವುದರಿಂದ ದೇವಸ್ಥಾನದ ಭಕ್ತಾಭಿಮಾನಿಗಳು ಸೀಯಾಳ ನೀಡುವಂತೆ ಮನವಿ ಮಾಡಿದ್ದಾರೆ. ಸೀಯಾಳ ನೀಡಲಿಚ್ಛಿಸುವವರು ಹೆಚ್ಚಿನ ಮಾಹಿತಿಗಾಗಿ 8884839672 , 8431114808 ಇವರನ್ನು ಸಂಪರ್ಕಿಸಬಹುದು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading