ಗ್ರೀನ್ ವ್ಯೂ ಮೋಡೆಲ್ ಅರೆಬಿಕ್ ಸ್ಕೂಲ್ ಆರ್ಟ್ ಫೆಸ್ಟ್ Lehza 2.0 ಪ್ರತಿಭಾ ಸಂಗಮ – 2026

ಅನ್ಸಾರಿಯಾ ಎಜುಕೇಶನ್ ಸೆಂಟರ್ ಅಧೀನ ದಲ್ಲಿರುವ ಗ್ರೀನ್ ವ್ಯೂ ಮೋಡೆಲ್ ಅರೇಬಿಕ್ ಸ್ಕೂಲ್ ನಲ್ಲಿ ಪ್ರವಾದಿ ಮಹಮ್ಮದ್ ಮುಸ್ತಫ( ಸ. ಅ.) ರವರ ಜನ್ಮ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿ ಗಳಿಗೆ ಸಾಂಸ್ಕೃತಿಕ ಕಲಾ ಸಾಹಿತ್ಯ ಸ್ಪರ್ಧೆ ಮತ್ತು ಪ್ರದರ್ಶನ ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ನಲ್ಲಿ ಜರಗಿತು.

. . . . . . . . .

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಯ ಅಧ್ಯಕ್ಷತೆಯನ್ನು ಹಾಜಿ ಕೆ. ಎಂ. ಅಬ್ದುಲ್ ಮಜೀದ್ ವಹಿಸಿದ್ದರು ಎಂ ಜೆ ಎಂ ಅಧ್ಯಕ್ಷ ಹಾಜಿ ಕೆ ಎಂ ಎಸ್ ಮಹಮ್ಮದ್, ಎಂ ಐ ಮದ್ರಸ ಸದರ್ ಉಸ್ತಾದ್ ಸಿರಾಜುದ್ದೀನ್ ಸಖಾಫಿ ಬಹುಮಾನ ವಿತರಿಸಿದರು.

. . . . . . .

ಅನ್ಸಾರ್ ಅಧ್ಯಕ್ಷ ಕೆ. ಬಿ. ಇಬ್ರಾಹಿಂ ಪ್ರತಿಭಾ ಪುರಸ್ಕಾರ ನೆರವೇರಿಸಿದರು ಶಾಲಾ ಸಂಯೋಜಕ ಕೆ. ಎಸ್. ಉಮ್ಮರ್ ಶುಭಾಶಂಸನೆಗೈದರು, ಗ್ರೀನ್ ವ್ಯೂ ಮುಖ್ಯ ಶಿಕ್ಷಕ ಇಲ್ಯಾಸ್ ಕಾಶಿ ಪಟ್ಟಣ ವಿಜೇತರ ಪಟ್ಟಿ ವಾಚಿಸಿದರು. ಶಾಲಾ ಸಂಯೋಜಕ ಶಾಫಿ ಕುತ್ತಾಮೊಟ್ಟೆ ಸ್ವಾಗತಿಸಿ, ಮದ್ರಸ ಮುಖ್ಯ ಶಿಕ್ಷಕ ಸಯ್ಯದ್ ಹುಸೈನ್ ಸಅದಿ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಅನ್ಸಾರಿಯಾ ಪದಾಧಿಕಾರಿಗಳಾದ ಎಸ್.ಪಿ ಅಬೂಬಕ್ಕರ್, ಕಲಾಂ ಬೀಜಕೊಚ್ಚಿ, ಶಹೀದ್ ಪಾರೆ, ಇಕ್ಬಾಲ್ ಸುಣ್ಣಮೂಲೆ, ಅನ್ಸಾರ್ ನಿರ್ದೇಶಕ ಬಶೀರ್ ಸಪ್ನಎಂ ಜೆ ಎಂ ನಿರ್ದೇಶಕ ಮೊಯಿದಿನ್ ಫ್ಯಾನ್ಸಿ ಮೊದಲಾದವರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading