ಚೆಂಬು ಗ್ರಾಮದ ದಬ್ಬಡ್ಕ ರಸ್ತೆಯಲ್ಲಿ ಕಾಂತುಬೈಲಿನಿಂದ ಮುಂದಕ್ಕೆ ಜು.19 ರಂದು ಸುರಿದ ಭಾರಿ ಮಳೆಗೆ ಕಿರುಸೇತುವೆಯೊಂದು ಕುಸಿದು ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿತ್ತು.
ಈ ಹಿನ್ನೆಲೆಯಲ್ಲಿ ಜು.22 ರಂದು ಲೋಕೋಪಯೋಗಿ ಇಂಜಿನಿಯರ್ ಪ್ರಮೋದ್ , ಪಯಸ್ವಿನಿ ಸಹಕಾರಿ ಸಂಘದ ಅದ್ಯಕ್ಷ ಅನಂತ್ ಎನ್.ಸಿ ರವರ ಉಪಸ್ಥಿತಿಯಲ್ಲಿ ಗುತ್ತಿಗೆದಾರ ಪ್ರಶಾಂತ್ ಮತ್ತು ಊರವರ ಸಹಕಾರದಿಂದ ತಾತ್ಕಾಲಿಕವಾಗಿ ದುರಸ್ತಿ ಕಾರ್ಯ ಮತ್ತು ಪರ್ಯಾಯ ರಸ್ತೆ ನಿರ್ಮಿಸುವ ಕಾರ್ಯ ನಡೆಯಿತು.
- Friday
- November 1st, 2024