Ad Widget

ಸುಬ್ರಹ್ಮಣ್ಯ ಮಹಿಳಾ ಸೊಸೈಟಿ ಚುನಾವಣೆ ಕಾಂಗ್ರೆಸ್ ಬಿಜೆಪಿ ಹೊಂದಾಣಿಕೆ 13 – 4 ಸ್ಥಾನಗಳ ಹಂಚಿಕೆ

17 ಸ್ಥಾನಕ್ಕೂ ನಿರ್ದೇಶಕರ ಅವಿರೋಧ ಆಯ್ಕೆ 25 ರಂದು ಅಧ್ಯಕ್ಷ ಚುನಾವಣೆ ರಾಜೀವಿ ಆರ್ ರೈ ಆಯ್ಕೆ ಬಹುತೇಕ ಖಚಿತ.

. . . . . . . . .

ಸುಳ್ಯ ತಾಲೂಕು ಮಹಿಳೆಯರ ವಿವಿಧೋದ್ದೇಶ ಸಹಕಾರ ಸಂಘದ ಆಡಳಿತ ಮಂಡಳಿಯ 17 ಸ್ಥಾನಗಳಿಗೂ ನಿರ್ದೇಶಕರ ಆಯ್ಕೆಯು ಕಾಂಗ್ರೆಸ್ ಬಿಜೆಪಿ ನಾಯಕರ ಹೊಂದಾಣಿಕೆಯಿಂದ ಅವಿರೋಧ ಆಯ್ಕೆ ನಡೆದಿದೆ.

. . . . . . .

ಆಡಳಿತ ಮಂಡಳಿಗೆ ಜ. 21ರಂದು‌ ಚುನಾವಣೆ ನಡೆಯಬೇಕಿತ್ತು. ನಾಮಪತ್ರ ಸಲ್ಲಿಕೆ ಜ. 9ರಿಂದ ಆರಂಭಗೊಂಡಿತ್ತು. ಒಟ್ಟು 17 ಸ್ಥಾನಗಳಿಗೆ 18 ಅಭ್ಯರ್ಥಿಗಳು ವಿವಿಧ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದರು.

ಸುಳ್ಯ ತಾಲೂಕಿನ ಅ ತರಗತಿ ಸದಸ್ಯರ ಸ್ಥಾನದಿಂದ ಅಧ್ಯಕ್ಷೆ ರಾಜೀವಿ ಆರ್. ರೈ, ಉಪಾಧ್ಯಕ್ಷೆ ಲೀಲಾ ಮನಮೋಹನ್, ಹಾಲಿ ನಿರ್ದೇಶಕರಾದ ಫೆಮಿದಾ ಸಂಶುದ್ದೀನ್, ಚಂದ್ರಾಕ್ಷಿ ಜೆ. ರೈ, ತಾರಾ ಮಲ್ಲಾರ, ದಿವ್ಯಕಲಾ ನಂಜೆ ಕಡಬ ತಾಲೂಕಿನಿಂದ ಅ ತರಗತಿಯಿಂದ ಶೋಭಾ ನಲ್ಲೂರಾಯ, ವಿಮಲಾ ರಂಗಯ್ಯ ,ಉದಯಕುಮಾರಿ, ಎ ಮೀಸಲು ಕ್ಷೇತ್ರದಿಂದ
ಶ್ಯಾಮಲಾ ಮೋಹನ್, ಬಿ ಮೀಸಲು ಕ್ಷೇತ್ರದಿಂದ ಲೀಲಾವತಿ ಉಪ್ಪಳಿಕೆ, ಪ.ಜಾತಿ ಮೀಸಲು ಕ್ಷೇತ್ರದಿಂದ ಅನಸೂಯಾ ಬಿ.ಎ,ಪ.ಪಂ. ಮೀಸಲು ಕ್ಷೇತ್ರದಿಂದ ನೂತನವಾಗಿ ಸೌಮ್ಯ ಬಿ.ಕೆ. ಕಾಂಗ್ರೆಸ್ ಬೆಂಬಲಿತರಾಗಿದ್ದರೆ, ಹೊಂದಾಣಿಕೆಯ ಪ್ರಕಾರ ಸುವರ್ಣಿನಿ ಎನ್.ಎಸ್ ,ಸುಜಾತ ಗಣೇಶ್ , ಶೋಭಾ ನಲ್ಲೂರಾಯ, ಮತ್ತು ತ್ರಿವೇಣಿ ದಾಮ್ಲೆ ಆಯ್ಕೆಯಾಗಲಿದ್ದಾರೆ ಇದರೊಂದಿಗೆ ಹೊಂದಾಣಿಕೆಯ ಮೂಲಕ ಬಿಜೆಪಿ ಕಾಂಗ್ರೆಸ್ ಒಂದಾಗಿದ್ದು ಅಧಿಕೃತ ಅಧಿಕೃತ ಘೋಷಣೆ ಇನ್ನಷ್ಟೆ ಆಗಬೇಕಾಗಿದೆ.ಅಲ್ಲದೆ ಅಧ್ಯಕ್ಷಿಯ ಚುನಾವಣೆಯು 25 ರಂದು ನಡೆಯಲಿದ್ದು ರಾಜೀವಿ ಆರ್ ರೈ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತಮಾಗಿದೆ .


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading