ಸುಬ್ರಹ್ಮಣ್ಯದಲ್ಲಿ ರವಿ ಕಕ್ಕೆಪದವು ಅವರಿಗೆ ಸ್ವಾಮೀಜಿಯವರಿಂದ ಸನ್ಮಾನ

ಸುಬ್ರಹ್ಮಣ್ಯ ನವಂಬರ್ 07 : ಆರ್ಯಭಟ ಪ್ರಶಸ್ತಿ ಪುರಸ್ಕೃತ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ರವಿ ಕಕ್ಕೆಪದವು ಅವರಿಗೆ ಸುಬ್ರಹ್ಮಣ್ಯ ಕುಲ್ಕುಂದದ ಯಜ್ಞೇಶ್ ಆಚಾರ್ ಅವರ ದಾಸ ನಿವಾಸದಲ್ಲಿ ಸುಬ್ರಹ್ಮಣ್ಯ ಮಠಾಧೀಶ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಎಡನೀರು ಮಠಾಧೀಶರವರಿಂದ ಶುಕ್ರವಾರ ಸನ್ಮಾನ ಕಾರ್ಯಕ್ರಮ ನಡೆಯಿತು.

. . . . . . . . .

ಸನ್ಮಾನ ಮಾಡಿ ಆಶೀರ್ವಚನ ನೀಡಿದ ಸುಬ್ರಹ್ಮಣ್ಯ ಮಠಾಧೀಶರಾದ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿಯವರು “ರವಿ ಕಕ್ಕೆ ಪದವು ಅವರು ಈ ವರ್ಷದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಯೊಂದಿಗೆ ಈಗಾಗಲೇ ಹಲವು ಪ್ರಶಸ್ತಿಗಳನ್ನು ಪಡ್ಕೊಂಡಿದ್ದಾರೆ. ಇದಕ್ಕೆಲ್ಲ ಕಾರಣ ಅವರ ನಿರಂತರವಾದಂತಹ ಸಮಾಜ ಸೇವೆ. ಕುಕ್ಕೆ ಸುಬ್ರಹ್ಮಣ್ಯದಂತಹ ಪವಿತ್ರ ಕ್ಷೇತ್ರಕ್ಕೆ ದಿನಂಪ್ರತಿ ಸಾವಿರಾರು ಭಕ್ತಾದಿಗಳು ಬರುವುದರಿಂದ ಇಲ್ಲಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಅದನ್ನ 550ನೇ ವಾರದಲ್ಲಿ ನಿರಂತರವಾಗಿ ರವಿ ಕಕ್ಕೆಪದವು ಅವರು ನಡೆಸುತ್ತಿದ್ದಾರೆ. ಎಲ್ಲಿ ಸ್ವಚ್ಛತೆ ಇದೆಯೋ ಅಲ್ಲಿ ದೇವರ ಸಾನಿಧ್ಯ ಇದೆ. ರವಿಯವರ ಈ ಸಮಾಜ ಸೇವೆ ನಿರಂತರವಾಗಿ ಮುಂದುವರೆಯಲಿ” ಎಂದು ಆಶೀರ್ವದಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading