ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಮರಣಕೇಕೆ ಹಾಕುತ್ತಿದೆ. ಜಿಲ್ಲೆಯಲ್ಲಿ ದಿನದಂದ ದಿನಕ್ಕೆ ಸೋಂಕಿತರ ಜೊತೆಗೆ ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿದೆ. ಇಂದು ಕೊರೊನಾ ಮಹಾಮಾರಿ ಇದುವರೆಗೆ ಮೂವರನ್ನು ಬಲಿ ಪಡೆದಿದೆ. ಬಾಣಂತಿ, ವೃದ್ಧೆ ಸಹಿತ ಭಟ್ಕಳ, ಉಳ್ಳಾಲ ಹಾಗೂ ಪುತ್ತೂರು ಮೂಲದ ಮೂವರು ಕೋವಿಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ವರದಿಯಾಗಿದೆ.
ನಿನ್ನೆ ಜಿಲ್ಲೆಯಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದರು. ಕಳೆದ ನಾಲ್ಕೈದು ದಿನದಿಂದ ಕೊರೊನಾ ಪೀಡಿತರ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದ್ದು ಕೊರೊನಾ ಹಿಡಿತ ಹೆಚ್ಚುತ್ತಿದೆ.