ಕಸ್ತೂರಿ ರಂಗನ್ ವರದಿ ಅನುಷ್ಠಾನದಿಂದಾಗಿ ಬಾಧಿತವಾಗಲಿರುವ ಸುಳ್ಯ ತಾಲೂಕಿನ ೧೦ ಗ್ರಾಮ ಪಂಚಾಯತ್ ಗಳಲ್ಲಿ ಯೋಜನೆ ಕೈಬಿಡುವಂತೆ ಆಗ್ರಹಿಸಿ ನ.9 ರಂದು ಪ್ರತೀ ಗ್ರಾಮ ಪಂಚಾಯತ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸುಳ್ಯ ತಾಲೂಕು ಸಮಿತಿ ನಿರ್ಣಯಿಸಿದೆ.
ಶುಕ್ರವಾರ ಗುತ್ತಿಗಾರಿನಲ್ಲಿ ಜರಗಿದ ಸುಳ್ಯ ತಾಲೂಕು ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.
ಅಂದು ವರದಿಯಲ್ಲಿ ಬಾಧಿತವಾಗಲಿರುವ ಪ್ರತೀ ಗ್ರಾಮಗಳಿಗೆ ತೆರಳಿ ಅಲ್ಲಿನ ಪಂಚಾಯತ್ ಮೂಲಕ ಸರಕಾರಕ್ಕೆ ಬೇಡಿಕೆ ಸಲ್ಲಿಸುವುದರೊಂದಿಗೆ, ಈ ಹಿಂದೆ ಪ್ರತೀ ಗ್ರಾಮ ಪಂಚಾಯತ್ ನ ವಿಶೇಷ ಗ್ರಾಮಸಭೆಯಲ್ಲಿ ಕೈಗೊಂಡು ಸರಕಾರಕ್ಕೆ ಸಲ್ಲಿಸಿದ್ದ ವರದಿಯನ್ನ ಮತ್ತೆ ಸರಕಾರದ ಗಮನಕ್ಕೆ ತರುವುದರೊಂದಿಗೆ, ವರದಿ ಬಾಧಿತ ಗ್ರಾಮದ ಸಾರ್ವಜನಿಕರು ಮುಂದಿನ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಜಾಗೃತಿ ಮೂಡಿಸಲು ರೂಪುರೇಷೆ ಯನ್ನ ಕೈಗೊಳ್ಳಲಾಯಿತು.
ಸಭೆಯಲ್ಲಿ ವೇದಿಕೆ ಜಿಲ್ಲಾ ಸಮಿತಿ ಸದಸ್ಯರಾದ ಸತೀಶ್ ಟಿ.ಎನ್. ಕೊಲ್ಲಮೊಗ್ರು, ಭಾನುಪ್ರಕಾಶ್ ಪೆರುಮುಂಡ, ಭರತ್ ಕನ್ನಡ್ಕ, ಸದಸ್ಯರುಗಳಾದ ಜಯರಾಮ ಕಟ್ಟೆಮನೆ, ಬಸಪ್ಪ ಕೊಳಗೆ, ಚಂದ್ರಶೇಖರ ಕೊಂದಾಳ ಉಪಸ್ಥಿತರಿದ್ದರು.
- Thursday
- November 21st, 2024