ಗ್ರಾಮ ವಿಕಾಸ ಸಮಿತಿ ಮಂಗಳೂರು, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಹಾಗೂ ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು, ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯ ಕುಕ್ಕೆಸುಬ್ರಹ್ಮಣ್ಯ, ಸುಬ್ರಹ್ಮಣ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಯೋಗದೊಂದಿಗೆ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ನವಂಬರ್ 8 ರಿಂದ 14ರ ವರೆಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯದಲ್ಲಿ ನಡೆಯಲಿದೆ. ಎಲ್ಲರೂ ಈ ಸದಾವಕಾಶದ ಸದುಪಯೋಗ ಪಡೆದುಕೊಳ್ಳಬಹುದು. ವಿವೇಕಾನಂದ ಪಾಲಿಟೆಕ್ನಿಕ್ ನ ಮಾನ್ಯತೆ ಪಡೆದ ಪ್ರಮಾಣ ಪತ್ರ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ಈ ತರಬೇತಿಯಲ್ಲಿ ಕೃಷಿ ಯಂತ್ರೋಪಕರಣ ದುರಸ್ತಿ, ವಿದ್ಯುತ್ ಉಪಕರಣ, ಗ್ಯಾಸ್ ಸ್ಟವ್,ಗ್ಯಾಸ್ ಗೀಝರ್ ಇತ್ಯಾದಿ ದುರಸ್ತಿ, ಪ್ಲಂಬಿಂಗ್, ಇಲೆಕ್ಟ್ರೀಷಿಯನ್, ಫ್ಯಾಷನ್ ಡಿಸೈನಿಂಗ್, ಫುಡ್ ಟೆಕ್ನಾಲಜಿ, ಕೃಷಿ, ಕಸಿ ಕಟ್ಟುವುದು, ಜೇನು ಕೃಷಿ, ಹೈನುಗಾರಿಕೆ, ಕೋಳಿ ಮತ್ತು ಕುರಿ ಸಾಕಾಣೆ, ಮೊಬೈಲ್ ಫೋನ್ ದುರಸ್ತಿಯ ಬಗ್ಗೆ ತಿಳಿದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಮನೋಜ್ ಸುಬ್ರಹ್ಮಣ್ಯ (9945878194) ಶ್ರೀಕುಮಾರ್ ಸುಬ್ರಹ್ಮಣ್ಯ (8722443249) ಇವರನ್ನು ಸಂಪರ್ಕಿಸಬಹುದು.