Ad Widget

ಭಕ್ತಕೋಡಿಯಲ್ಲಿ ಅ.25 ರಂದು ಕಾರುಗಳ ನಡುವೆ ಅಪಘಾತ- ಗಾಯಾಳು ಪಡ್ಪಿನಂಗಡಿಯ ಓಮ್ನಿ ಚಾಲಕ ಇಂದು ಮೃತ್ಯು

ಪುತ್ತೂರು ಕಾಣಿಯೂರು ರಸ್ತೆಯ ಭಕ್ತಕೋಡಿಯಲ್ಲಿ ಅ.25 ರಂದು ಮಾರುತಿ ಓಮ್ನಿ ಮತ್ತು ಸ್ವಿಫ್ಟ್ ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಓಮ್ನಿ ಚಾಲಕ ಪಡ್ಪಿನಂಗಡಿ ಸಮೀಪ ಅಡಿಬಾಯಿ ಅಬ್ದುಲ್ ರಹಿಮಾನ್ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.

. . . . . . . . .

ಐವತ್ತೊಕ್ಲು ಗ್ರಾಮದ ಅಡಿಬಾಯಿ ರಹಿಮಾನ್ ಅವರು ಮೃತಪಟ್ಟವರು. ಅವರಿಗೆ 39 ವರ್ಷ ವಯಸ್ಸಾಗಿತ್ತು. ಅಬ್ದುಲ್ ರಹಿಮಾನ್ ಅವರು ಚಲಾಯಿಸುತ್ತಿದ್ದ ಮಾರುತಿ ಓಮ್ನಿಗೆ ಸರ್ವೆ ಗ್ರಾಮದ ಭಕ್ತಕೋಡಿ ಎಂಬಲ್ಲಿ ವಿರುದ್ಧ ಧಿಕ್ಕಿನಿಂದ ಸ್ವಿಫ್ಟ್ ಕಾರು ಬಂದು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಮಾರುತಿ ಓಮ್ನಿ ಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಅಬ್ದುಲ್ ರಹಿಮಾನ್ ಅವರಿಗೆ ತಲೆ, ಎದೆ ಮತ್ತು ಎರಡೂ ಕಾಲುಗಳಿಗೆ ತೀವ್ರ ಗಾಯವಾಗಿತ್ತು. ಆ ತಕ್ಷಣ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಅಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸಿದೆ ಅ.27 ರಂದು ಮೃತಪಟ್ಟಿದ್ದಾರೆ.

. . . . . . .

ಘಟನೆಯ ಕುರಿತು ಸಂಪ್ಯ ಪೊಲೀಸರು ಸ್ಥಳಕ್ಕೆ ತೆರಳಿ ಮಾಹಿತಿ ಪಡೆದು ಸ್ವಿಫ್ಟ್ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಮೃತರ್‍ಪುತ್ನಿ ಆಯಿಷಾ, ಪುತ್ರರಾದ ಮುಹಮ್ಮದ್ ಅಝೀಮ್, ಮುಹಮ್ಮದ್ ಹಸೀಮ್, ಪುತ್ರಿ ಫಾತಿಮತ್ ಅಫೀದಾರನ್ನು ಅಗಲಿದ್ದಾರೆ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading