ತೊಡಿಕಾನ ಕ್ಷೇತ್ರಕ್ಕೆ ಸಂಬಂಧಿಸಿದ ದೇವರಗುಂಡಿ ಬಳಿ ಇತ್ತೀಚೆಗೆ ಕೆಲವರು ಬಂದು ಅಶ್ಲೀಲವಾಗಿ ಫೋಟೋಗಳನ್ನು ತೆಗೆದಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ದೇವಸ್ಥಾನಕ್ಕೆ ಸಂಬಂಧಿಸಿದವರ ಜೊತೆಗೆ ಯಾವುದೇ ಅನುಮತಿ ಪಡೆಯದೇ ಆಶ್ಲೀಲ ಚಿತ್ರಗಳನ್ನು ಶೂಟಿಂಗ್ ಮಾಡಿದ್ದಾರೆ. ಧಾರ್ಮಿಕ ಕ್ಷೇತ್ರ ಆಗಿರುವುದರಿಂದ ಈ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಭಕ್ತರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರು ” ದೇವಸ್ಥಾನಕ್ಕೆ ಸಂಬಂಧಿಸಿದ ಜಾಗವಾದರೂ ಅದು ಅರಣ್ಯ ವ್ಯಾಪ್ತಿಯಲ್ಲಿದೆ, ನಾವು ಅಲ್ಲಿ ಯಾವುದೇ ಸೆಕ್ಯೂರಿಟಿ ಇಡಲು ಅಸಾಧ್ಯ, ಆದರೇ ಇಂತಹ ಘಟನೆಗಳು ನಡೆಯಬಾರದು, ಇಂತಹ ಘಟನೆಗಳಿಂದ ಶ್ರೀ ಕ್ಷೇತ್ರಕ್ಕೆ ಧಕ್ಕೆಯಾಗಬಾರದು ಎಂದಿದ್ದಾರೆ.