Ad Widget

ಕೋವಿಡ್ 19 ರ ಹಿನ್ನೆಲೆಯಲ್ಲಿ ಲಾಕ್ಡೌನ್ ಸಡಿಲಿಕೆ ಐದನೆಯ ಹಂತಕ್ಕೆ ಬಂದಿದ್ದರೂ ಇನ್ನು ಕೂಡ ಪ್ರಥಮ ಹಂತದಲ್ಲಿಯೇ ಸಿಲುಕಿಕೊಂಡು ಸಂಕಷ್ಟದಲ್ಲಿರುವ ಧ್ವನಿ ಮತ್ತು ಬೆಳಕು ಸಂಸ್ಥೆಗಳು

     ಕೋವಿಡ್ 19 ಇಡೀ ವಿಶ್ವವನ್ನೇ ತಲ್ಲಣಗೊಳಿಸಿ ಇತ್ತೀಚಿಗೆ ಕೆಲವು ತಿಂಗಳುಗಳಿಂದ ಜನಜೀವನ ಅಲ್ಪಮಟ್ಟಿಗೆ ಸುಧಾರಿಸಿಕೊಂಡು ಸ್ವಲ್ಪಮಟ್ಟಿಗೆ ಚೇತರಿಕೆಯ ದಾಪುಗಾಲು ಇಡುತ್ತಿದೆ. ವ್ಯಾಪಾರ ಕೇಂದ್ರಗಳು , ಕೈಗಾರಿಕಾ ಕೇಂದ್ರಗಳು, ಅಲ್ಪಸ್ವಲ್ಪ ಪ್ರವಾಸೋದ್ಯಮಗಳು ನಿಧಾನವಾಗಿ ಚೇತರಿಸಿಕೊಂಡು ಬರುತ್ತಿದ್ದರೆ, ಇನ್ನೂ ಕೂಡ ತಮ್ಮ ಕೆಲಸ ಕಾರ್ಯಗಳಿಗೆ ಮರಳಲು ಸಾಧ್ಯವಾಗದೆ , ಯಾವುದೇ ಬೆಳವಣಿಗೆಗಳು ಇಲ್ಲದೆ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಶಿಕ್ಷಣ ಇಲಾಖೆ, ಸಿನಿಮಾ ಇಂಡಸ್ಟ್ರಿಗಳು, ಕ್ರೀಡಾ ಮತ್ತು ಸಾಂಸ್ಕೃತಿಕ ಕಲಾಮೇಳ ಉತ್ಸವಗಳು ಲಾಕ್ ಡೌನ್ ಸಂದರ್ಭದ ಒಂದನೆಯ ಹಂತದಲ್ಲಿಯೇ ಇರುವಂತಿದೆ. ಅದರಲ್ಲಿಯೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೇ ಅವಲಂಬಿಸಿಕೊಂಡು ಜೀವನ ಸಾಗಿಸುತ್ತಿದ್ದ ಧ್ವನಿ ಮತ್ತು ಬೆಳಕು ಸಂಸ್ಥೆಗಳ ಮಾಲಕರುಗಳು ಜೀವನದ ಸಂಕಷ್ಟದಲ್ಲಿ  ಸಿಲುಕಿ ವೇದನೆಯನ್ನು ಅನುಭವಿಸುತ್ತಿರುವುದು ಕಂಡುಬರುತ್ತಿದೆ. ಲಕ್ಷಾನು’ಗಟ್ಟಲೆ ಮೊತ್ತವನ್ನು ಬರಿಸಿ ಸಂಗ್ರಹಿಸಿ ಇಟ್ಟಂತಹ ಉಪಕರಣಗಳು ಹಲವು ತಿಂಗಳುಗಳಿಂದ ಉಪಯೋಗಿಸದೆ ಇದ್ದ ಕಾರಣಗಳಿಂದ ಕಣ್ಣ ಮುಂದೆಯೇ ನಶಿಸಿಹೋಗುತ್ತಿದೆ. ಇವರ ಸಂಕಷ್ಟವನ್ನು ಕೇಳುವವರೇ ಇಲ್ಲದಂತಾಗಿದೆ. ಇದೀಗ ಅವರಿಗೆ ಅನುಕೂಲವಾಗಿದ್ದ ಉತ್ತಮ ದಿನಗಳಾದ ಕೃಷ್ಣ ಜನ್ಮಾಷ್ಟಮಿ, ವೈಭವದ ದಸರಾ ಹಬ್ಬ , ಈದ್ ಮಿಲಾದ್ ಮುಂತಾದ ಸಡಗರದ ದಿನಗಳು ಅವರ ಕಣ್ಣಮುಂದೆ ಒಂದರ ಹಿಂದೆ ಒಂದರಂತೆ ಕಳೆದುಹೋಗುತ್ತಿದೆ. ಆದರೆ ದೈವ ಇಚ್ಚೆಗೆ ಶರಣಾದ ಇವರು ಏನನ್ನು ಮಾಡಲು ಸಾಧ್ಯವಾಗದೆ , ತಮ್ಮ ಕಷ್ಟಗಳನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳಲು ಸಾಧ್ಯವಾಗದೆ ಬಹಳ ದಯನೀಯ ಪರಿಸ್ಥಿತಿಯಲ್ಲಿ ಮುಂದಿನ ಸುಂದರ ದಿನಗಳಿಗೆ ಕಾಯುತ್ತಿದ್ದಾರೆ. ಈಗಾಗಲೇ ಸರ್ಕಾರದ ಗಮನವನ್ನು ತಮ್ಮ ಕಡೆಗೆ ತರಲು , ತಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಸಹಕರಿಸುವಂತೆ ಮನವಿ ಮಾಡಿಕೊಂಡು ತಮ್ಮ ತಮ್ಮ ಸಂಘಟನೆಗಳ ಮೂಲಕ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಮನವಿಗಳನ್ನು ಸಲ್ಲಿಸಿದ್ದರೂ ಯಾವುದೇ ಪ್ರಯೋಜನಗಳು ಬಾರದೆ , ಮುಂದೇನು ಎಂಬ ಪ್ರಶ್ನಾರ್ಥಕ ದಲ್ಲಿ ಕಾಲಕಳೆಯುತ್ತಿದ್ದಾರೆ. ಬಹುತೇಕ ಮಂದಿ ಉಪಕರಣಗಳ ಖರೀದಿಗಾಗಿ ಹಲವಾರು ಬ್ಯಾಂಕುಗಳಿಂದ ಸಾಲವನ್ನು ಪಡೆದವರಾಗಿದ್ದಾರೆ. ಈಗಾಗಲೇ ಸಾಲದ ಬಡ್ಡಿ ಯು ಚಕ್ರಬಡ್ಡಿ ಯಾಗಿ ಅವರ ಮುಂದೆ ಬೆಟ್ಟದಂತೆ ನಿಂತಿದ್ದರೆ ತೀರಿಸಲು ಸಾಧ್ಯವಾಗದೆ, ಸರಕಾರದ ಕಡೆ ಆಶಾಭಾವನೆಯ ಚಿತ್ತದಿಂದ ನೋಡುತ್ತಿದ್ದಾರೆ. ಇವರ ಸಂಕಷ್ಟಕ್ಕೆ ಸರಕಾರಗಳು ಕೂಡಲೇ ಸ್ಪಂದಿಸಿ ಅವರ ಕಷ್ಟಕ್ಕೆ ಸಹಕಾರಿ ಯಾಗಬೇಕಿದೆ. ಅವರುಗಳು ಸೇವಾವಧಿಯ ಸಂದರ್ಭದಲ್ಲಿ ಇದ್ದ ಸರಕಾರದ ನೀತಿ ನಿಯಮಗಳನ್ನು ಪಾಲಿಸಿ ಸರಕಾರಕ್ಕೆ ಅವರು ನೀಡ ಬೇಕಾದ ತೆರಿಗೆಗಳನ್ನು ಪಾವತಿಸಿ ದೇಶದ ಅಭಿವೃದ್ಧಿಗೆ ಕೈಜೋಡಿಸಿದವರಾಗಿದ್ದಾರೆ. ಇದೀಗ ಅವರ ಸಂಕಷ್ಟದ ಸಂದರ್ಭದಲ್ಲಿ ಸರಕಾರಗಳು ಅವರ ಕಡೆ ಗಮನಹರಿಸ ಬೇಕಾದದ್ದು ಕರ್ತವ್ಯವಾಗಿದೆ.

. . . . .

ವರದಿ : ಹಸೈನಾರ್ ಜಯನಗರ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!