ಮುಕ್ಕೂರು-ಪೆರುವಾಜೆ ಶ್ರೀ ಶಾರದೋತ್ಸವ ಸಮಿತಿ ಆಶ್ರಯದಲ್ಲಿ ಮುಕ್ಕೂರು ಶಾಲಾ ವಠಾರದಲ್ಲಿ ನಡೆದ 5 ನೇ ವರ್ಷದ ಶ್ರೀ ಶಾರದೋತ್ಸವ ಅ.25 ರಂದು ಮುಕ್ಕೂರು ಶಾಲಾ ವಠಾರದಲ್ಲಿ ನಡೆಯಿತು.
ಪತಂಜಲಿ ಶಾಸ್ತ್ರೀ ಮುಕ್ಕೂರು ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಬೆಳಗ್ಗೆ ಶಾರದಾ ಪ್ರತಿಷ್ಟೆ, ಪೂಜೆ, ಗಣಹೋಮ, ಮಹಾಪೂಜೆ ನಡೆಯಿತು. ಮಧ್ಯಾಹ್ನ ಮುಕ್ಕೂರು ವಠಾರದಿಂದ ಮೆರವಣಿಗೆ ಸಾಗಿ ಚೆನ್ನಾವರ ಗೌರಿ ಹೊಳೆಯಲ್ಲಿ ಜಲಸ್ಥಂಭನ ನಡೆಯಿತು.
ಈ ಸಂದರ್ಭದಲ್ಲಿ ಮುಕ್ಕೂರು ಪೆರುವಾಜೆ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಕಿರಣ್ ಚಾಮುಂಡಿಮೂಲೆ, ಉಪಾಧ್ಯಕ್ಷ ಪ್ರಸಾದ್ ಕುಂಡಡ್ಕ, ಕಾರ್ಯದರ್ಶಿ ಸುದೀಪ್ ಕುಮಾರ್ ಕೆ, ಖಜಾಂಜಿ
ದಿವಾಕರ ಬೀರುಸಾಗು, ಬೆಳ್ಳಾರೆ ಸಿಎ ಬ್ಯಾಂಕ್ ಮಾಜಿ ನಿರ್ದೇಶಕ ಪದ್ಮನಾಭ ಶೆಟ್ಟಿ ಪೆರುವಾಜೆ,
ನಿವೃತ್ತ ಬ್ಯಾಂಕ್ ಉದ್ಯೋಗಿ ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಕುಶಾಲಪ್ಪ ಗೌಡ ಪೆರುವಾಜೆ, ಮುಕ್ಕೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ಸುಧಾಕರ ರೈ ಕುಂಜಾಡಿ, ಗಣೇಶ್ ಶೆಟ್ಟಿ ಕುಂಜಾಡಿ, ಎಸ್ ಡಿಎಂಸಿ ಅಧ್ಯಕ್ಷ ಕುಂಞಣ್ಣ ನಾಯ್ಕ ಅಡ್ಯತಕಂಡ, ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷ ದಯಾನಂದ ಜಾಲು, ಶಾರದೋತ್ಸವ ಸಮಿತಿಯ ಸಂಜೀವ ಗೌಡ ಬೈಲಂಗಡಿ, ವಿಜಯ ಕುಮಾರ್ ರೈ ಪೆರ್ವೋಡಿ, ನಾರಾಯಣ ಕೊಂಡೆಪ್ಪಾಡಿ, ಲಿಂಗಪ್ಪ ಗೌಡ ಕುಂಡಡ್ಕ, ರೂಪಾನಂದ ಬೀರುಸಾಗು, ಸಂದೀಪ್ ಕುಂಜಾಡಿ, ಚರಣ್ ಮಡಿವಾಳ, ಯುವಸೇನೆ ಅಧ್ಯಕ್ಷ ಸಚಿನ್ ರೈ ಪೂವಾಜೆ, ದಾಮೋದರ ಗೌಡ ತೋಟ ಮರಿಕೇಯಿ ಮೊದಲಾದವರು ಉಪಸ್ಥಿತರಿದ್ದರು.