ಮುಂದಿನ ತಿಂಗಳು ನವಂಬರ್ 4 ರಿಂದ ಮದುವೆಯಾಗಲು ವಧುವಿನ ವಯಸ್ಸು 21 ಕಡ್ಡಾಯವಾಗಿ ಆಗಿರಬೇಕೆಂಬ ಹೊಸ ಕಾಯ್ದೆ ಜಾರಿಗೆ ಬರುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ಊಹಾಪೋಹ ವರದಿಗಳಿಂದ ಸಾರ್ವಜನಿಕ ವಲಯದಲ್ಲಿ ಪರಸ್ಪರ ಚರ್ಚೆಗಳು ಕೇಳತೊಡಗಿದೆ. ಕೆಲವು ಕಡೆಗಳಲ್ಲಂತೂ ಈಗಾಗಲೇ 18, 19 ವರ್ಷಗಳ ಹೆಣ್ಣುಮಕ್ಕಳ ನಿಶ್ಚಿತಾರ್ಥ ಮಾಡಿಕೊಂಡವರ ಮದುವೆ ಮಾಡಿಸಿಕೊಡುವ ತರಾತುರಿಯಲ್ಲಿ ಕೆಲವು ಪೋಷಕರು ಮುಗಿ ಬಿದ್ದಿರುತ್ತಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಅಮರ ಸುಳ್ಯ ಸುದ್ದಿ ಪತ್ರಿಕೆ ವತಿಯಿಂದ ಮಾಹಿತಿ ಸಂಗ್ರಹಿಸಿದಾಗ ಇದುವರೆಗೆ ಸರಕಾರದಿಂದ ಆಗಲಿ ಅಥವಾ ಸಂಬಂಧಪಟ್ಟ ಯಾವುದೇ ಇಲಾಖೆಯಿಂದ ಆಗಲಿ ನಮಗೆ ಯಾವುದೇ ರೀತಿಯ ಮಾಹಿತಿ ಬಂದಿರುವುದಿಲ್ಲ ಎಂದು ಸ್ಪಷ್ಟನೆಯನ್ನು ತಿಳಿಸಿರುತ್ತಾರೆ. ಒಟ್ಟಿನಲ್ಲಿ ಯಾವುದಾದರೂ ವಿಷಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದಾಗ ಅದರ ಬಗ್ಗೆ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು ಮುಂದಾದರೆ ಈ ರೀತಿಯ ಉಲ್ಬಣ ವಿಷಯಗಳಿಂದ ತಪ್ಪಿಸಿಕೊಳ್ಳಬಹುದಾಗಿದೆ.
- Saturday
- April 5th, 2025