
ಜಯನಗರ ಮಿಲಿಟರಿ ಗ್ರೌಂಡ್ ಸೇರಿ 19ನೇ ವಾರ್ಡಿನ ಬಿಜೆಪಿ ವಾರ್ಡ್ ಸಮಿತಿ ರಚನೆ ನಗರ ಅಧ್ಯಕ್ಷ ಐ.ಬಿ. ಚಂದ್ರಶೇಖರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ನಗರ ಸಮಿತಿಯ ಕಾರ್ಯದರ್ಶಿ ಜಿನ್ನಪ್ಪ ಪೂಜಾರಿ, ಸಿಎ ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡು ಪನ್ನೆ,, ಸುಳ್ಯ ನ ಪಂ ಸದಸ್ಯರುಗಳಾದ ವಿನಯ ಕುಮಾರ್ ಕಂದಡ್ಕ, ಶಿಲ್ಪ ಸುದೇವ್, ಪಕ್ಷದ ಹಿರಿಯರಾದ ರಾಧಾಕೃಷ್ಣ ನಾಯಕ್ ಹಾಗೂ ಪಕ್ಷದ ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 19ನೇ ವಾರ್ಡಿನ ಅಧ್ಯಕ್ಷರಾಗಿ ಸುರೇಂದ್ರ ಕಾಮತ್, ಕಾರ್ಯದರ್ಶಿಯಾಗಿ ಜಗದೀಶ್ ಜಯನಗರ, ಉಪಾಧ್ಯಕ್ಷರಾಗಿ ಮಹಾಲಿಂಗ ಪಾಟಾಳಿ, ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ 20 ಮಂದಿಯನ್ನು ಆಯ್ಕೆ ಮಾಡಲಾಯಿತು. ಸುರೇಂದ್ರ ಕಾಮತ್ ಸ್ವಾಗತಿಸಿ ಪ್ರವೀಣ್ ಕುಮಾರ್ ಜಯನಗರ ನಿರೂಪಿಸಿ ವಂದಿಸಿದರು.