ಶಾಲಾ ಕಾಲೇಜುಗಳ ತರಗತಿಗಳು ಆನ್ಲೈನ್ ಮುಖಾಂತರ ನಡೆಯುತ್ತಿದ್ದು, ಸುಳ್ಯದ ಹಲವು ಗ್ರಾಮೀಣ ಪ್ರದೇಶಗಳಲ್ಲಿ (ಬಾಳುಗೋಡು, ಪೆರುವಾಜೆ) ನೆಟ್ವರ್ಕ್ ಸಮಸ್ಯೆಯಾಗುತ್ತಿದ್ದು, ಇದನ್ನು ಶೀಘ್ರ ಪರಿಹರಿಸುವಂತೆ ಕ್ಯಾಂಪಸ್ ಫ್ರಂಟ್ ಆಫ್ ಸುಳ್ಯ ಏರಿಯಾ ಸಮಿತಿ ನಿಯೋಗವು ತಹಶಿಲ್ದಾರರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಪ್ರತಿಯೊಬ್ಬರೂ ಕಡ್ಡಾಯವಾಗಿ ಆನ್ಲೈನ್ ತರಗತಿಗಳಿಗೆ ಹಾಜರಾಗಬೇಕು. ಇಲ್ಲದಿದ್ದರೆ ಪರೀಕ್ಷಾ ಸಮಯದಲ್ಲಿ ದಂಡ ವಿಧಿಸುತ್ತೇವೆ ಎಂದು ಕಾಲೇಜುಗಳು ಹೇಳುತ್ತಿವೆ. ಆದರೆ ತಮ್ಮ ಊರಿನಲ್ಲಿ ನೆಟ್ವರ್ಕ್ ಸಮಸ್ಯೆ ಇರುವಾಗ ಆನ್ಲೈನ್ ಶಿಕ್ಷಣ ಪಡೆಯುವುದಾದರು ಹೇಗೆ? ಎನ್ನುವುದು ವಿದ್ಯಾರ್ಥಿಗಳ ಪ್ರಶ್ನೆಯಾಗಿದೆ.
ಹಾಗಾಗಿ ಅತೀ ಶೀಘ್ರದಲ್ಲಿ ನೆಟ್ವರ್ಕ್ ಸಮಸ್ಯೆಯನ್ನು ಪರಿಹರಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಯಿತು
ನಿಯೋಗದಲ್ಲಿ ಕ್ಯಾಂಪಸ್ ಫ್ರಂಟ್ ಸುಳ್ಯ ಅಧ್ಯಕ್ಷರಾದ ಅರ್ಫೀದ್ ಅಡ್ಕಾರ್, ಉಪಾಧ್ಯಕ್ಷರಾದ ಶಮಾಲ್ ಸುಳ್ಯ, ಸಮಿತಿ ಸದಸ್ಯರಾದ ಮನ್ಸೂರ್ ಹಾಗೂ ಗಾಂಧೀನಗರ ಯುನಿಟ್ ಅಧ್ಯಕ್ಷರಾದ ಶುಹೈಲ್ ಸುಳ್ಯ ಉಪಸ್ಥಿತರಿದ್ದರು.