ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಪುತ್ತೂರು, ಸಹಕಾರ ಭಾರತಿ ದ.ಕ.ಜಿಲ್ಲೆ ಇವುಗಳ ಸಹಯೋಗದೊಂದಿಗೆ ‘ಉದ್ಯೋಗ ನೈಪುಣ್ಯ ತರಬೇತಿ’ ಯು ಸಮಾರೋಪ ಸಮಾರಂಭ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಅ.17ರಂದು ನಡೆಯಿತು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ
ಪ್ರತಾಪ್ ಸಿಂಹ ನಾಯಕ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಪ್ರಚಾರಕ ಸುರೇಶ್ ಕುಮಾರ್ , ವಿವೇಕಾನಂದ ಪಾಲಿಟೆಕ್ನಿಕ್ ಸಂಚಾಲಕ ಮಹಾದೇವ್ ಶಾಸ್ತ್ರಿ,ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರ್, ಪಂಜ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ,
ಮುಖ್ಯಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ, ಮುರುಳ್ಯ ಪ್ರಾ.ಕೃ.ಪ.ಸ.ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಿದಾನಂದ , ಗ್ರಾಮ ವಿಕಾಸ ಸಮಿತಿ ತಾಲೂಕು ಸಂಯೋಜಕ ವಿನೋದ್ ಬೊಳ್ಮಲೆ, ಕಾರ್ಯಕ್ರಮ ಸಂಯೋಜಕ, ಪಂಜ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ಶಿಬಿರದ ಕುರಿತು ಬಹಳ ಮೆಚ್ಚುಗೆ ವ್ಯಕ್ತಪಡಿಸಿದರು. ಶಿಬಿರಾರ್ಥಿಗಳಿಂದ ಸಂಪನ್ಮೂಲ ವ್ಯಕ್ತಿಗಳನ್ನು ಗೌರವಿಸಿದರು.
ಶಿಬಿರಾರ್ಥಿಗಳಿಗೆ ಶಿಬಿರದಲ್ಲಿ ಕೃಷಿ ಯಂತ್ರೋಪಕರಣಗಳ ಬಳಕೆ ಹಾಗೂ ದುರಸ್ತಿ ತರಬೇತಿ, ವಿದ್ಯುತ್ ಉಪಕರಣಗಳ ದುರಸ್ತಿ ಬಗ್ಗೆ ತರಬೇತಿ, ಹೈನುಗಾರಿಕೆ, ಕೋಳಿ ಮತ್ತು ಕುರಿ ಸಾಕಾಣೆ, ಮೊಬೈಲ್ ಫೋನ್ ದುರಸ್ತಿ. ಕೃಷಿ ,ಕಸಿ ಕಟ್ಟುವುದು, ಜೇನು ಕೃಷಿ ತರಬೇತಿ, ಫುಡ್ ಟೆಕ್ನಾಲಜಿ, ಪ್ಲಂಬಿಂಗ್ ಮತ್ತು ಇಲೆಕ್ಟ್ರೀಶಿಯನ್ ತರಬೇತಿ , ಪ್ಯಾಷನ್ ಡಿಸೈನಿಂಗ್ ತರಬೇತಿ ನಡೆಯಿತು.ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಂದ ಆತ್ಮನಿರ್ಭರ್ ಭಾರತ್ ಗೀತೆ ಹಾಡಿದರು. ಉದಯ ಶಂಕರ್ ಅಡ್ಕ ಸ್ವಾಗತಿಸಿದರು. ಗುರು ಪ್ರಸಾದ್ ತೋಟ ಪ್ರಾಸ್ತಾವಿಕವಾಗಿಗೈದರು. ತೀರ್ಥಾನಂದ ಕೊಡೆಂಕಿರಿ ನಿರೂಪಿಸಿದರು.
ಉದ್ಘಾಟನಾ ದಿನದ ನಡೆದ ಸಾಮಾನ್ಯ ಯೋಜನಾ ವೆಚ್ಚದ ವಿಚಾರದಲ್ಲಿ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರ ಸಂಘದ ಡೆಪ್ಯುಟಿ ಮೆನೇಜರ್ ಡಾ. ರಾಮಕೃಷ್ಣ ಭಟ್ ವಿಚಾರ ಮಂಡಿಸಿದರು. ಅ. ೧೩ರಂದು ನಡೆದ ಹೈನುಗಾರಿಕೆಯಲ್ಲಿ ಯಂತ್ರೊಪಕರಣಗಳ ಬಳಕೆ ಬಗ್ಗೆ ಕುಸುಮಾಧರ, ಹೈನುಗಾರಿಕೆ ನಿರ್ವಹಣೆ, ಹಟ್ಟಿ ರಚನೆ ಹಾಗೂ ಶುದ್ಧ ಹಾಲು, ಹಾಲಿನ ಪೋಷಕಾಂಶಗಳ ಬಗ್ಗೆ ಡಾ. ಕೇಶವ ಸುಳ್ಳಿ, ಆಡು ಮತ್ತು ಕುರಿ ಸಾಕಾಣೆ ಬಗ್ಗೆ ಡಾ. ಸೂರ್ಯನಾರಾಯಣ ಭಟ್, ನಾಟಿಕೋಳಿ ಮತ್ತು ಗಿರಿರಾಜ ಕೋಳಿಗಳ ಸಾಕಾಣೆ ಮತ್ತು ಮಾರಾಟ ಬಗ್ಗೆ ಹರೀಶ್ ಬೀದಿಗುಡ್ಡೆ, ಬ್ಲಾಯ್ಲರ್ ಕೋಳಿ ಸಾಕಾಣೆ ಮತ್ತು ಮಾರಾಟ ಬಗ್ಗೆ ನಯನಕುಮಾರ್ ರೈ, ಸಂಘದ ಕಾರ್ಯಚಟುವಟಿಕೆ ಮತ್ತು ಹೈನುಗಾರಿಕೆಯ ವಿವಿಧ ಮಜಲುಗಳ ಬಗ್ಗೆ ಹರೀಶ್‌ಕುಮಾರ್ ಮಾಹಿತಿ ನೀಡಿದರು. ಅ. ೧೫ರಂದು ನಡೆದ ಆಡು, ಕುರಿಗಳ ತಳಿಗಳು ಸಾಕಾಣೆ ಮತ್ತು ಗೂಡು ರಚನೆ ಬಗ್ಗೆ ಡಾ. ದೇವಿಪ್ರಸಾದ್ ಕಾನತ್ತೂರು, ಮೇವುಗಳ ಬಗ್ಗೆ ಶ್ರೀಮತಿ ಶ್ರುತಿ ಮಾಹಿತಿ ನೀಡಿದರು. ಇದೇ ದಿನ ನಯನಕುಮಾರ್ ರೈಯವರ ಕೋಳಿಫಾರ್ಮ್‌ಗೆ ಭೇಟಿ ನೀಡಿ ಕ್ಷೇತ್ರ ವೀಕ್ಷಣೆ ನಡೆಸಲಾಯಿತು. ಅ. ೧೬ರಂದು ನಡೆದ ಬ್ಯಾಂಕ್ ಸಾಲಗಳ ಮಾಹಿತಿ ವಿಚಾರದಲ್ಲಿ ಲೊಸ್ರೆಡೋ, ಅಶೋಕ್ ನಾಯಕ್, ಉಷಾ ನಾಯಕ್ ಮಾಹಿತಿ ನೀಡಿದರು. ಇದೇ ಸಂದರ್ಭ ಕುಸುಮಾಧರರವರಿಂದ ಕೃಷಿ ಮತ್ತು ಹೈನುಗಾರಿಕೆ ಯಂತ್ರೊಪಕರಣಗಳ ಮಾಹಿತಿ ನಡೆಯಿತು. ಅ. ೧೭ರಂದು ನಾಯಿ ಸಾಕಾಣೆ ಮತ್ತು ತಳಿಗಳ ಬಗ್ಗೆ ರಾಧಾಕೃಷ್ಣ ಭಟ್ ಮಲೆಯಾಳ ತರಬೇತುದಾರರಾಗಿ ಸಹಕರಿಸಿದರು. ಚಿದಾನಂದ ಬಿಳಿಮಲೆಯವರ ಹೈನುಗಾರಿಕೆ ಕ್ಷೇತ್ರ ವೀಕ್ಷಣೆ ನಡೆಯಿತು.
ಪ್ಲಂಬಿಂಗ್ & ಇಲೆಕ್ಟ್ರಿಕಲ್ಸ್ ವಿಭಾಗದಲ್ಲಿ ವಿಶ್ವನಾಥ ನಡುತೋಟ, ಪ್ರಕಾಶ್ ಉದಯ, ಸುಫ್ರಿಂ ಪೈಪ್ಸ್‌ನ ಸಿಬ್ಬಂದಿಗಳು, ದಿನೇಶ್, ಯೋಗೀಶ್ ಎಲ್.ಎನ್., ತರಬೇತುದಾರರಾಗಿ ಸಹಕರಿಸಿದರು.
ಎಲೆಕ್ಟ್ರಿಕಲ್ ವಿಭಾಗದಲ್ಲಿ ದಯಾನಂದ ಕೆಬ್ಬೋಡಿ, ದಿನೇಶ್ ಮಂಜುಶ್ರೀ ಇಲೆಕ್ಟ್ರಿಕಲ್ಸ್, ದಿನೇಶ್ ಪೈಕ, ಯೋಗೀಶ್, ಬಾಲಕೃಷ್ಣ ಬೊಳ್ಳೂರು ತರಬೇತುದಾರರಾಗಿ ಸಹಕರಿಸಿದರು. ಮೊಬೈಲ್ ದುರಸ್ತಿ ವಿಭಾಗದಲ್ಲಿ ನಿತ್ಯಾನಂದ ಮೇಲ್ಮನೆ, ಪ್ರದೀಪ್ ಸುಬ್ರಹ್ಮಣ್ಯ, ಲೋಕೇಶ್ ಗುಡ್ಡೆಮನೆ, ಜಯಂತ ಮಡಪ್ಪಾಡಿ, ಉಲ್ಲಾಸ್ ಏನೆಕಲ್ಲು, ರವಿ ನಾಗತೀರ್ಥ ಸಹಕರಿಸಿದರು.
ವಿವಿಧ ದಿನಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಸುಹಾನ, ಜಗದೀಶ್ ಪರಮಲೆ, ಶ್ಯಾಂ ಗೊರಗೋಡಿ, ಶ್ರೀಧರ ಪೂಜಾರಿ, ನಾಗರಾಜ್, ಅನಿಲ್ ಬಳಂಜ, ವೀರಪ್ಪ ಗೌಡ ಕಣ್ಕಲ್, ಕೇಶವ, ಆನಂದ ಬೇರ್ಯ, ತಿರುಮಲೇಶ್ವರ ಭಟ್, ತೀರ್ಥಾನಂದ ಕೊಡೆಂಕಿರಿ, ರಾಮಣ್ಣ ಕಲ್ಮಡ್ಕ ತರಬೇತುದಾರರಾಗಿ ಭಾಗವಹಿಸಿದ್ದರು.