ಕಸ್ತೂರಿರಂಗನ್ ವರದಿ ಜಾರಿಗೂ ಮೊದಲು ರೈತರ, ಜನರ ಅಭಿಪ್ರಾಯ ವನ್ನು ಸರಕಾರಗಳು ಪಡೆಯಬೇಕು. ಒಂದು ವೇಳೆ ಅಭಿಪ್ರಾಯ ಪಡೆಯದೇ ಜಾರಿಗೊಂಡರೆ ಮಲೆನಾಡು ಜಂಟಿ ಕ್ರಿಯಾ ಸಮಿತಿ ಜನಾಂದೋಲನ ಕೈಗೊಂಡು ಹೋರಾಟ ನಡೆಸಲಿದೆ ಎಂದು ಮಲೆನಾಡು ಜಂಟಿ ಕ್ರಿಯಾಯ ಸಂಚಾಲಕ ಪ್ರದೀಪ್ ಕೆ.ಎಲ್. ಹಾಗೂ ಅಶೋಕ್ ಎಡಮಲೆ ತಿಳಿಸಿದ್ದಾರೆ.
ಅ.17 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕ. ಕಂದಾಯ ಗ್ರಾಮ ನೈಸರ್ಗಿಕ ಮತ್ತು ಜನ ವಸತಿಯನ್ನು ಗುರುತಿಸಲು ಭೌಗೋಳಿಕವಾಗಿ ವಿಫಲವಾಗಿದೆ. ಈ ವರದಿಯಂತೆ ಕಾನೂನು ಮಂಡನೆಯಾದರೆ ಕಾಡಿನ ಅಂಚಿನಲ್ಲಿರುವ ಕಂದಾಯ ಗ್ರಾಮಗಳು ಹಾಗೂ ಅದಕ್ಕೆ ಸಂಬಂಧ ಪಟ್ಟ ತಾಲೂಕು ಕೇಂದ್ರಗಳ ಪರಿಸರ ಆಧಾರಿತ ಹಸಿರು ತಾಲೂಕು ಎಂಬುವುದನ್ನು ಪೂರಕವಾದ ಯಾವುದೇ ತರಹದ ಪೂರ್ವ ಸಿದ್ಧತೆ ಇಲ್ಲ. ಅರಣ್ಯ ಇಲಾಖೆಗೆ ಏಕಚಕ್ರಾದಿಪತಿ ಹಕ್ಕು, ಮತ್ತು ಕಂದಾಯ ಇಲಾಖೆಗಳ ಹಕ್ಕುಗಳನ್ನು ಮೊಟಕುಗೊಳಿಸಲಾಗಿದೆ ಹೀಗೆ ಜನರಿಗೆ, ಕೃಷಿಕರಿಗೆ ತೊಂದರೆಯಾಗುವ ಅಂಶಗಳೇ ಹೆಚ್ಚಿರುವುದರಿಂದ ಅಲ್ಲಿ ಬದುಕುವ ಕಲೆಯೇ ನಾಶವಾಗುತ್ತದೆ ಎಂದು ಹೇಳಿದರು.
ಈ ವರದಿ ಜಾರಿಯಾಗಬೇಕಾದರೆ ಪರಿಸರ ಸಂರಕ್ಷಣೆ ಪ್ರಕಾರ ನೈಸರ್ಗಿಕ ವಲಯ ಮತ್ತು ಸಾಂಸ್ಕೃತಿಕ ಕಂದಾಯ ವಲಯಗಳ ಸರಾ ಸಾಗಾಟವಾಗಿ ಬೇರ್ಪಡಿಸುವಿಕೆ ಆಗಬೇಕು. ಸಾಂಸ್ಕೃತಿಕ ಮತ್ತು ನೈಸರ್ಗಿಕ ವಲಯಕ್ಕೆ 371 ನೇ ವಿಧಿಯನ್ನು ಅಳವಡಿಸಿ ಅದರ ಪ್ರಕಾರ ಜನ ಜೀವನ ಸಾಂಸ್ಕೃತಿಕ, ಆಚಾರ, ವಿಚಾರ, ನೈಸರ್ಗಿಕ, ನಿಸರ್ಗ ಆಹಾರ ಪದ್ಧತಿಯ ಸಂರಕ್ಷಣೆಯ ಪ್ರಕಾರ ಅಂಶವನ್ನು ಸೇರ್ಪಡೆಗೊಳಿಸಬೇಕು. ಸ್ಥಳೀಯ ಆಡಳಿತ ಮತ್ತು ಸ್ಥಳೀಯರ ಸದಸ್ಯತನ ಪ್ರಜಾಸತ್ತಾತ್ಮಕ ವಾಗಿ ಚುನಾಯಿಸಿ ಪರಿಸರ ಮತ್ತು ಸಾಂಸ್ಕೃತಿಕ ಪ್ರದೇಶದ ಕೌನ್ಸಿಲ್ ಸ್ಥಾಪಿಸಬೇಕು. ರೈತನ ಬ್ರಿಟಿಷ್ ಕಾಲ ದಿಂದಲೇ ಬಂದ ಹಕ್ಕುಗಳನ್ನು ಪರಿಸರದ ಹೆಸರಿನಲ್ಲಿ ಅಡೆತಡೆಗಳನ್ನು ಮಾಡಬಾರದು. ಶೇ.50 ಕಂದಾಯ ಗ್ರಾಮ ಜನರಿಗೆ ಪರಿಸರ ಮತ್ತು ಸಾಂಸ್ಕೃತಿಕ ವಲಯದಲ್ಲಿ ನೌಕರಿ ನೀಡಿ ವಲಯವಾರು ಸಾಂಸ್ಕೃತಿಕ ಮತ್ತು ನೈಸರ್ಗಿಕ ವಾಗಿ ವಿಂಗಡಿಸಬೇಕು ಅಲ್ಲದೇ ಇನ್ನೂ ಹಲವು ಅಂಶಗಳನ್ನು ಗುರುತಿಸಬೇಕು ಎಂದು ಹೇಳಿದ ಅವರು 2012 ರಿಂದ ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿಯ ಜನಾಭಿಪ್ರಾಯ ದ ಬಗ್ಗೆ ಸುಪ್ರೀಂ ಕೋರ್ಟ್ ಮತ್ತು ಪರಿಸರ ನ್ಯಾಯಾಲಯಕ್ಕೆ ಸೂಕ್ತ ಅಫಿಡವಿಟ್ ನ್ನು ಸಲ್ಲಿಸುವುದರಿಂದ ಈ ಕೂಡಲೇ ಸರಕಾರ ತನ್ನ ಅಟಾರ್ನಿ ಜನರಲ್ ಮುಖಾಂತರ ಜನರು, ರೈತರು ಕಾನೂನು ತಿಳಿದವರಿಂದ ಈ ಕೂಡಲೇ ಅಫಿಡವಿಟ್ ನ್ನು ಸಲ್ಲಿಸಬೇಕು. ಅದು ಇಲ್ಲವಾದರೆ ಸರಕಾರ ಅಫಿಡವಿಟ್ ನ್ನು ಹಾಕಲು ಅನುವು ಮಾಡಿಕೊಡಬೇಕು. ಮುಖ್ಯಮಂತ್ರಿಗಳು ಸಂಪುಟ ಸಭೆ ಕರೆದು ಜನರ ಅಭಿಪ್ರಾಯ ಪಡೆಯಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇವೆ. ಇಲ್ಲವಾದರೆ ನಾವೇ ಜನಾಂದೋಲನ ನಡೆಸಿ ಜನರಿಗೆ ತೊಂದರೆಯಾಗದಂತೆ ಜನಾಂದೋಲನ ಕೈಗೊಳ್ಳಲಿದ್ದೇವೆ ಎಂದು ಅವರು ವಿವರ ನೀಡಿದರು.