Ad Widget

ಐವರ್ನಾಡು : ಅ.19 ರಂದು ಹಸಿರುಸೇನೆ ಘಟಕದ ಕಛೇರಿ ಉದ್ಘಾಟನೆ ಹಾಗೂ ಗೌರವಾರ್ಪಣೆ

ಕ.ರಾ.ರೈತ ಸಂಘ ಹಸಿರುಸೇನೆ ಐವರ್ನಾಡು ಘಟಕ ಸುಳ್ಯ ಇದರ ನೂತನ ಕಛೇರಿಯ ಉದ್ಘಾಟನೆ ಹಾಗೂ ಗೌರವಾರ್ಪಣೆ ಕಾರ್ಯಕ್ರಮವು ಅ. 19ರ ಸೋಮವಾರದಂದು ಪೂರ್ವಾಹ್ನ ಗಂಟೆ 10 ಕ್ಕೆ ಐವರ್ನಾಡಿನ ಶ್ರೀ ದೇವಿ ಕೃಪಾ ಸಂಕೀರ್ಣದಲ್ಲಿ ಜರುಗಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐವರ್ನಾಡು ಕ.ರಾ.ರೈ ಸಂಘದ ಅಧ್ಯಕ್ಷರಾದ ಶ್ರೀ ಪದ್ಮನಾಭ ಗೌಡ ವಹಿಸಲಿದ್ದಾರೆ. ಕ.ರಾ. ರೈತ ಸಂಘದ ಪ್ರಧಾನ ಕಾಯದರ್ಶಿ ಶ್ರೀ ರವಿಕಿರಣ್ ಪುಣಚರವರು ನೂತನ ಕಛೇರಿಯ ಉದ್ಘಾಟನೆಗೈಯಲಿದ್ದಾರೆ. ಮುಖ್ಯ ಅತಿಥಿಯಾಗಿ ಕ.ರಾ.ರೈ. ಸಂಘ ಐವರ್ನಾಡು ಇದರ ತಾಲೂಕು ಅಧ್ಯಕ್ಷರಾದ ಶ್ರೀ ಲೋಲಾಜಾಕ್ಷ ಬೂತ ಕಲ್ಲು ಭಾಗವಹಿಸಲಿದ್ದು,
ಕಾರ್ಯಕ್ರಮದಲ್ಲಿ ಯುವ ಚಿಂತಕ ಮತ್ತು ಸಂಶೋಧಕ ಚರಣ್ ಐವರ್ನಾಡು ಮತ್ತು 2019 – 20ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 600 ಕ್ಕಿಂತ ಹೆಚ್ಚು ಅಂಕ ಗಳಿಸಿದ ಮಲ್ಲಿಕಾ. ಕೆ ಗುಂಪಕಲ್ಲು ಇವರುಗಳಿಗೆ ಗೌರವಾರ್ಪಣೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಕೃಷಿ ಸವಾಲುಗಳು ಮತ್ತು ಸ್ಥಳೀಯ ಜಾನಪದ ಎಂಬ ವಿಷಯದ ಬಗ್ಗೆ ಚಿಂತನೆ ನಡೆಯಲಿರುವುದು ಎಂದು ಸಂಘಟಕರು ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading