ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ಘಟಕದ ಪಂಜ ವಲಯದ ಯುವಕರ ತಂಡವು ಅ.13 ರಂದು ಕೂತ್ಕುಂಜ ಗ್ರಾಮದ ಬಸ್ತಿಕಾಡು ಎಂಬಲ್ಲಿನ ಕಿಂಡಿ ಅಣೆಕಟ್ಟು ನಡುವೆ ಸಿಲುಕಿದ್ದ ಮರದ ದಿಮ್ಮಿಗಳು ಹಾಗೂ ಕಸವನ್ನು ಶ್ರಮದಾನದ ಮೂಲಕ ತೆಗೆದು ಸ್ವಚ್ಛ ಗೊಳಿಸಿದರು.
ಶ್ರಮದಾನದಲ್ಲಿ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ವಿಶ್ವನಾಥ ಸಂಪ, ಆಶಿತ್ ಕಲ್ಲಾಜೆ, ಜನಾರ್ಧನ, ಧರ್ಮಪಾಲ ಕೇನ್ಯ, ಮಾಧವ ಎಡಮಂಗಲ, ಗಣೇಶ್ ಮುರುಳ್ಯ, ದಿನೇಶ್ , ಶ್ರೀನಿವಾಸ ಪಂಬೆತ್ತಾಡಿ, ದಿನೇಶ್ ಎಣ್ಮೂರು, ವಿನಯ್ ಪ್ರಸಾದ್ ಪಂಬೆತ್ತಾಡಿ, ಮೇಲ್ವಿಚಾರಕ ವಸಂತ ಎಲ್ ಹಾಗೂ ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.