ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣಾ ಘಟಕ ಸಂಪಾಜೆ ವಲಯದ ವತಿಯಿಂದ ದಿನಾಂಕ 13/10/2020 ರಂದು ಅಂತರರಾಷ್ಟ್ರೀಯ ವಿಪತ್ತು ತಡೆ ದಿನಾಚರಣೆ
ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಸ್ವಚ್ಛತಾ ಕಾರ್ಯ ಕ್ರಮವನ್ನು ನಡೆಸಲಾಯಿತು.
ಶ್ರೀ ಮಹಾವಿಷ್ಣು ದೇವಸ್ಥಾನದ ಆವರಣದಲ್ಲಿದ್ದ ಕಾಡು ಸಸಿಗಳನ್ನು ಕಡಿದು ಸ್ವಚ್ಛತೆ ಗೊಳಿಸಲಾಯಿತು. ಸುಮಾರು ಎರಡು ಗಂಟೆಗಳ ಕಾಲ ಸ್ವಯಂಸೇವಕರು ಕೆಲಸವನ್ನು ನಿರ್ವಹಿಸಿರುತ್ತಾರೆ .
ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಜಯರಾಮ ಪಿ.ಜಿ , ಸ್ವಯಂಸೇವಕರುಗಳಾದ ಅನಂತ ಪಿ.ಅರ್ , ಚಿದಾನಂದ, ಶರತ್ ಅಡ್ಯಡ್ಕ, ವಿನಯ ಮೂಲೆ ಮಜಲು, ಶರತ್ ಕಲ್ಲುಗುಂಡಿ, ರತೀಶನ್, ಸುರೇಶ ಪರಿವಾರಕಾನ, ಸುನಿಲ್ ಕಾಯಾರ್ತೋಡಿ, ಜಿತೇಂದ್ರ ಬಳ್ಳಡ್ಕ, ಸುನಿಲ್ ಕೇರ್ಪಳ, ಗಿರೀಶ್ ಮಡಪ್ಪಡಿ, ಶರತ್ ಜಾಲ್ಸೂರುರವರು ಸ್ವಚ್ಛತಾ ಕಾರ್ಯ ದಲ್ಲಿ ಪಾಲ್ಗೊಂಡರು.
ವಲಯದ ಮೇಲ್ವಿಚಾರಕರಾದ ನವೀನ್ ಹಾಗೂ ಸೇವಪ್ರತಿನಿಧಿ ಗೀತಾ, ದೇವಾಲಯದ ಅರ್ಚಕರು ಹಾಗೂ ಸಿಬ್ಬಂದಿಯಾದ ದೇವಿಪ್ರಸಾದ್ ಕುದ್ಪಾಜೆಯವರು ಉಪಸ್ಥಿತರಿದ್ದರು .
- Thursday
- November 21st, 2024