ತೋಟಗಾರಿಕಾ ಇಲಾಖೆ ಸುಳ್ಯ ಇದರ ಆಶ್ರಯದಲ್ಲಿ ಕಳಂಜ ಗ್ರಾಮ ಪಂಚಾಯತಿನ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಸಮುದಾಯ ಭವನದಲ್ಲಿ 2 ದಿನಗಳ ಜೇನುಕೃಷಿ ತರಬೇತಿ ಕಾರ್ಯಾಗಾರವು ಅ.12 ರಂದು ಉದ್ಘಾಟನೆಗೊಂಡಿತು.
ದಕ್ಷಿಣ ಕನ್ನಡ ಜಿಲ್ಲಾ ಜೇನು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಚಂದ್ರ ಕೋಲ್ಚಾರು ದೀಪ ಬೆಳಗಿಸಿ ಕಾರ್ಯಾಗಾರವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಜೇನುಕೃಷಿ ತರಬೇತುದಾರರಾಗಿ ನಿವೃತ್ತ ಕೈಗಾರಿಕಾ ವಿಸ್ತರಣಾಧಿಕಾರಿ ಶ್ರೀ ವೀರಪ್ಪ ಗೌಡ ಹಾಗೂ ಉಪನ್ಯಾಸಕರಾದ ಶ್ರೀ ರಾಧಾಕೃಷ್ಣರು ಉಪಸ್ಥಿತರಿದ್ದರು. ಸುಳ್ಯ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಜಾಹ್ನವಿ ಕಾಂಚೋಡು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕೀರ್ತನ್ ಶೇಣಿ ಪ್ರಾರ್ಥಿಸಿ, ತೋಟಗಾರಿಕಾ ಸಹಾಯಕ ನಿರ್ದೇಶಕರಾದ ಶ್ರೀಮತಿ ಸುಹಾನ.ಪಿ.ಕೆ ಸ್ವಾಗತಿಸಿ, ಇಲಾಖಾ ಸಿಬ್ಬಂದಿ ವಂದಿಸಿದರು. ತೋಟಗಾರಿಕಾ ಇಲಾಖೆಯ ಶ್ರೀ ಧರ್ಮಪಾಲ ಕಾರ್ಯಕ್ರಮ ನಿರೂಪಿಸಿದರು.
ತದನಂತರ ತರಬೇತಿ ಕಾರ್ಯಾಗಾರ ನಡೆಯಿತು. ಈ ತರಬೇತಿಯಲ್ಲಿ ವಿವಿಧ ಗ್ರಾಮಗಳ ಜೇನುಕೃಷಿ ಆಸಕ್ತರು ಭಾಗವಹಿಸಿದ್ದರು. 2 ದಿನಗಳ ತರಬೇತಿ ಕಾರ್ಯಾಗಾರದ ಅಂಗವಾಗಿ ನಾಳೆ ಪ್ರಗತಿಪರ ಕೃಷಿಕರಾದ ಶ್ರೀ ಮನಮೋಹನ್ ಬೆಟ್ಟಂಪಾಡಿಯರ ಮನೆಯಲ್ಲಿ ಜೇನುಕೃಷಿ ಪ್ರಾತ್ಯಕ್ಷಿಕೆ ನಡೆಯಲಿದೆ.