ಅಡ್ಡಬೈಲು – ಬೀದಿಗುಡ್ಡೆ ರಸ್ತೆ ಹೋರಾಟ ಸಮಿತಿಯಿಂದ ಮೂರನೇ ಹಂತದ ಸಭೆ ಅ.11ರಂದು ನಡೆಯಿತು.
ರಾಜಕೀಯ ರಹಿತವಾಗಿ ಊರಿನ ಎಲ್ಲಾ ಸಂಘಸಂಸ್ಥೆಗಳು ಹಾಗೂ ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿದ್ದರು. ರಸ್ತೆ ಹೋರಾಟ ಸಮಿತಿಯ ಸದಸ್ಯರು ಮಾನ್ಯ ಶಾಸಕರಾದ ಎಸ್.ಅಂಗಾರರನ್ನು ಭೇಟಿ ಮಾಡಿ ರಸ್ತೆ ಅಭಿವೃದ್ಧಿಯ ಬಗ್ಗೆ ವಿನಂತಿಸಿಕೊಂಡಿದ್ದು, ಶಾಸಕರು ಸೂಕ್ತ ಸ್ಪಂದನೆ ನೀಡಿರುತ್ತಾರೆ. ಮುಂದಿನ 15 ದಿನದಲ್ಲಿ ಗ್ರಾಮ ಸಡಕ್ ಯೋಜನೆಯು ಮಂಜೂರುಗೊಳ್ಳಲಿದ್ದು ಡಿಸೆಂಬರ್ ಅಂತ್ಯದಲ್ಲಿ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಆ ತನಕ ಅಡ್ಡಬೈಲಿನಿಂದ ಕೇನ್ಯ ತನಕ ಗುಂಡಿಗಳನ್ನು ಮುಚ್ಚಿಕೊಡಲಾಗುವುದು ಎಂದು ಶಾಸಕರು ಭರವಸೆ ನೀಡಿರುತ್ತಾರೆ.