ಸುಳ್ಯ ನಗರ ಪ್ರದೇಶಗಳ ಮುಖ್ಯ ರಸ್ತೆಗಳಲ್ಲಿ ಕೆಆರ್ ಡಿಸಿಎಲ್ ವತಿಯಿಂದ ಮಾಣಿ-ಮೈಸೂರು ರಸ್ತೆ ನಿರ್ಮಾಣ ಮಾಡುವ ಸಂದರ್ಭ ರಸ್ತೆಯ ಎರಡು ಬದಿಗಳಲ್ಲಿ ಲಕ್ಷಾಂತರ ರೂಪಾಯಿಗಳ ಖರ್ಚು ಮಾಡಿ ಬೃಹತ್ ಚರಂಡಿಗಳ ನಿರ್ಮಾಣ ಮಾಡಿಸಿ ನಮ್ಮ ಕೆಲಸ ಇಲ್ಲಿಗೆ ಮುಗಿಯಿತು ಎಂದು ಹೋಗಿರುತ್ತಾರೆ. ನಂತರ ಮಳೆಗಾಲದ ಸಂದರ್ಭದಲ್ಲಿ ಮಳೆಯ ನೀರು ರಸ್ತೆಯಲ್ಲಿ ಅರಿಯುವುದೋ ಅಥವಾ ಚರಂಡಿಯಲ್ಲಿ ಹರಿಯುವುದೋ ಎಂದು ನೋಡಲು ಅವರಿಗೆ ಸಮಯವೇ ಇಲ್ಲದಂತಾಗಿದೆ.
ಈ ವಿಷಯದ ಕುರಿತು ಸುಳ್ಯದ ಹಲವು ಸಾಮಾಜಿಕ ಹೋರಾಟಗಾರರು ನಾನಾರೀತಿ ದೂರುಗಳನ್ನು ಈಗಾಗಲೇ ನೀಡಿದರೂ ನಮಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ಗಾಢನಿದ್ದೆಗೆ ಜಾರಿದ್ದಾರೆ. ಸಮಸ್ಯೆಯನ್ನು ಎದುರಿಸಿ ರಸ್ತೆಯಲ್ಲಿ ನಡೆದಾಡುವ ನೂರಾರು ಮಂದಿ ಸಾರ್ವಜನಿಕರು ಸಂಬಂಧಪಟ್ಟ ಇಲಾಖೆಯವರಿಗೆ ಹಿಡಿ ಶಾಪವನ್ನು ಹಾಕುತ್ತಿದ್ದಾರೆ. ಒಟ್ಟಿನಲ್ಲಿ ಕಾಮಗಾರಿ ನಡೆಸುವ ಸಂದರ್ಭ ಮುಂದೆ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿತುಕೊಂಡು ಸರಿಯಾದ ರೀತಿಯಲ್ಲಿ ನೋಡಿಕೊಳ್ಳದಿದ್ದರೆ ಇದೇ ರೀತಿಯ ಅವೈಜ್ಞಾನಿಕ ತೊಂದರೆಗಳನ್ನು ಜನಸಾಮಾನ್ಯ ಎದುರಿಸಬೇಕಾಗುತ್ತದೆ.