ಸುಳ್ಯದ ಶಾಂತಿನಗರದಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆಗೈದ ಘಟನೆ ಇಂದು ಬೆಳಿಗ್ಗೆ ವರದಿಯಾಗಿದೆ. ಈತ ಕೊಡಗಿನಲ್ಲಿ ನಡೆದ ಪ್ರಭಾವಿ ಮುಖಂಡರ ಕೊಲೆ ಪ್ರಕರಣದ ಆರೋಪಿ ಎಂದು ತಿಳಿದುಬಂದಿದೆ.
ಕೊಲೆಯಾದ ವ್ಯಕ್ತಿ ಸಂಪತ್ ತಿಳಿದು ಬಂದಿದ್ದು ಈ ಹಿಂದೆ ಬಾಲಚಂದ್ರ ಕಳಗಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಇಂದು 6 ಗಂಟೆಗೆ ಅವರ ನಿವಾಸದಿಂದ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಅಲ್ಲಿಗೆ ಬಂದ ದುಷ್ಕರ್ಮಿಗಳು ಅವರ ಮೇಲೆ ದಾಳಿ ನಡೆಸಿದ್ದಾರೆ. ಮೊದಲು ಕಾರಿನ ಗ್ಲಾಸಿಗೆ ಗುಂಡು ಹಾರಿಸಿದ್ದಾರೆ. ಆ ವೇಳೆ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಾಂಪೌಂಡ್ ಗೆ ತಾಗಿ ನಿಂತಿದೆ. ಅಲ್ಲಿಂದ ತಪ್ಪಿಸಿಕೊಂಡ ಸಂಪತ್ ಸಮೀದಲ್ಲಿದ್ದ ಕಾಂತಪ್ಪ ಎಂಬವರ ಮನೆಗೆ ಓಡಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ದುಷ್ಕರ್ಮಿಗಳು ಹಿಂಬಾಲಿಸಿಕೊಂಡು ಹಲ್ಲೆ ನಡೆಸಿ ಕೊಲೆಗೈದಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ದುಷ್ಕರ್ಮಿಗಳು ಸಂಪತ್ತನ್ನು ಕೊಲೆ ಮಾಡಲು ಬಳಸಿದ ನಾಡ ಕೋವಿಯನ್ನು ಸ್ಥಳದಲ್ಲೇ ಬಿಟ್ಟು ಹೋಗಿರುವುದು ಕಂಡುಬರುತ್ತಿದೆ ಕೊಲೆ ಮಾಡಿ ನೋಡುವ ಸಂದರ್ಭದಲ್ಲಿ ತೋಟದ ಬದಿ ಬಳಸಿದ ನಾಡ ಕೋವಿಯನ್ನು ಬಿಸಾಡಿ ಹೋಗಿರುವುದು ಕಂಡುಬಂದಿದೆ.
ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಚಂದ್ ಜೋಗಿ, ಎಸ್ ಐ ಹರೀಶ್, ಹಾಗೂ ಪೋಲೀಸರು ಸ್ಥಳದಲ್ಲಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
*ಗರ್ಭಿಣಿ ಮಹಿಳೆಯ ಎದುರಲ್ಲೇ ಹೊಡೆದು ಕೊಂದರು ಕಣ್ಣೆದುರಿನಲ್ಲಿ ಕೊಲೆ ಮಾಡುತ್ತಿರುವುದನ್ನು ಕಂಡ ಪದ್ಮನಾಭ ಪುಟ್ಟ ಅವರ ಪತ್ನಿ ಆತಂಕದ ನುಡಿಗಳು*
ಇಂದು ಮುಂಜಾನೆ ಕೊಲೆಗೀಡಾಗಿರುವ ಸಂಪತ್ ರವರನ್ನು ಅಟ್ಟಾಡಿಸಿಕೊಂಡು ಬಂದಾಗ ಸಂಪತ್ ಜೀವಭಯದಲ್ಲಿ ಪದ್ಮನಾಭ ಎಂಬವರ ಮನೆಯ ಒಳಗೆ ನುಗ್ಗಿ ಮನೆಯ ಮುಂಭಾಗದ ಮತ್ತು ಹಿಂಭಾಗದ ಬಾಗಿಲನ್ನು ಚಿಲ್ಕ ಹಾಕುತ್ತಿರುತ್ತಾರೆ.ಈ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ಹಂತಕರು ಮನೆಯ ಬಾಗಿಲು ತಳ್ಳಿ ಒಳಗೋಗಿದ್ದಾರೆ. ಈ ಸಂದರ್ಭದಲ್ಲಿ ಪದ್ಮನಾಭ ಅವರವರ ಪತ್ನಿ ಗರ್ಭಿಣಿ ಮಹಿಳೆ ಮನೆಯೊಳಗಿದ್ದು ಆತಂಕಗೊಂಡು ಕಿರುಚಾಡಲು ಪ್ರಾರಂಭಿಸಿದ್ದಾರೆ.ಅಷ್ಟರಲ್ಲಿಯೇ ಒಳ ಬಂದಿದ್ದ ದುಷ್ಕರ್ಮಿಗಳು ಮಚ್ಚಿನಿಂದ ಮತ್ತು ಕೋವಿಯನ್ನು ಬಳಸಿ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಸಂಪತ್ ನೆಲಕ್ಕೆ ಉರುಳಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅದೇ ಸಂದರ್ಭದಲ್ಲಿ ಪದ್ಮನಾಭ ಅವರ ಸಹೋದರ ತಿಮ್ಮಪ್ಪ ಅವರು ಮನೆಯ ಒಳಕ್ಕೆ ಬಂದು ಯಾರೋ ನನ್ನ ತಮ್ಮನನ್ನು ಹೊಡೆಯುತ್ತಿದ್ದಾರೆ ಎಂದು ಭಾವಿಸಿ ಪ್ರಶ್ನಿಸಿ ತಡೆಯಲು ಮುಂದಾದಾಗ ಹಂತಕರು ತಮ್ಮ ಕೈಯಲ್ಲಿದ್ದ ಕತ್ತಿಯಿಂದ ತಿಮ್ಮಪ್ಪನವರ ಮೇಲೆ ಬೀಸಿದಾಗ ತಿಮ್ಮಪ್ಪನವರ ಕೈಗೆ ಗಾಯಗೊಂಡಿದೆ. ಈ ಸಂದರ್ಭದಲ್ಲಿ ಮಾತನಾಡಿದ ಹಂತಕರು ನಮ್ಮ ನಾಯಕ ಕಳಗಿ ಅವರನ್ನು ಕೊಂದ ಕಾರಣಕ್ಕಾಗಿ ಇವರನ್ನು ಕೊಂದಿದ್ದೇವೆ ಎಂದು ಹೇಳಿದರೆಂದು ಮಹಿಳೆ ಹೇಳಿದರು. ಹಂತಕರು ಸಂಪೂರ್ಣ ಮುಖಕ್ಕೆ ಟವಲ್ ನಿಂದ ಮುಚ್ಚಿಕೊಂಡಿದ್ದ ಕಾರಣ ಮುಖಪರಿಚಯ ಸಿಗಲಿಲ್ಲ ಎಂದು ಹೇಳಿದ್ದಾರೆ. ಎಲ್ಲರೂ ಯುವಕರ ರೀತಿಯಲ್ಲಿ ಕಾಣುತ್ತಿದ್ದರು ಎಂದು ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.