ಕೊಲ್ಲಮೊಗ್ರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಮಕಾರು ಗ್ರಾಮದ ನಿವಾಸಿಗಳಿಗಾಗಿ ವಿಶೇಷ ಕೋವಿಡ್ ತಪಾಸಣಾ ಶಿಬಿರವನ್ನು ಅ.8 ರಂದು ಗುರುವಾರ ಪೂರ್ವಾಹ್ನ 10 ಗಂಟೆಗೆ ಕಲ್ಮಕಾರು ಹಳೆ ಅಂಗನವಾಡಿ ಕೇಂದ್ರದ ಬಳಿ ಹಮ್ಮಿಕೊಳ್ಳಲಾಗಿದೆ. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪರೀಕ್ಷೆ ನಡೆಸಿಕೊಳ್ಳಬಹುದು.
🔹ಪರೀಕ್ಷೆ ನಡೆಸಲು ಬರುವವರು ತಮ್ಮ ಮೊಬೈಲ್ ಪೋನ್ ಜೊತೆಗೆ ತರಬೇಕು.
🔹 ನೋಂದಾವಣೆಯ ಬಳಿಕ ನಿಮ್ಮ ಮೊಬೈಲ್ ನಂಬರಿಗೊಂದು ಒಟಿಪಿ ಸಂಖ್ಯೆ ಬರುತ್ತದೆ. ಅದನ್ನು ಆರೋಗ್ಯ ಕೇಂದ್ರದ ಸಿಬ್ಬಂದಿಯವರಿಗೆ ನೀಡಬೇಕಾಗಿರುತ್ತದೆ.
🔹ಕುಟುಂಬದ ಸದಸ್ಯರೆಲ್ಲರೂ ಒಂದೇ ಮೊಬೈಲ್ ನಂಬರನ್ನು ಬಳಸಿಕೊಳ್ಳಬಹುದು.
🔹ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಶಿಬಿರದಲ್ಲಿ ಪಾಲ್ಗೊಳ್ಳಬೇಕು
- Sunday
- February 2nd, 2025