ಉತ್ತರ ಪ್ರದೇಶದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಹಾಗೂ ಸಂತ್ರಸ್ತೆಯ ಮನೆಗೆ ಭೇಟಿನೀಡುವ ವೇಳೆ ಬಂಧನಕ್ಕೊಳಗಾದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕೋಶಾಧಿಕಾರಿ ಯ ಬಿಡುಗಡೆಗೆ ಆಗ್ರಹಿಸಿ ಸುಳ್ಯ ಏರಿಯಾ ವತಿಯಿಂದ ಪ್ರತಿಭಟನೆಯು ಸುಳ್ಯ ಬಸ್ಸು ನಿಲ್ದಾಣದ ಬಳಿ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಕ್ಯಾಂಪಸ್ ಫ್ರಂಟ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಅನ್ಸಾರ್ ಬೆಳ್ಳಾರೆ, ಸುಳ್ಯ ಏರಿಯಾ ಅಧ್ಯಕ್ಷರಾದ ಅರ್ಫೀದ್ ಅಡ್ಕಾರ್ ಮಾತನಾಡಿದರು.
ಈ ಸಂಧರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಸುಳ್ಯ ಕಾರ್ಯದರ್ಶಿ ಸಾಜಿದ್ ಸುಳ್ಯ, ಸದಸ್ಯರಾದ ಶಮಾಲ್, ಹಮೀದ್, ಸುಹೈಲ್ ಉಪಸ್ಥಿತರಿದ್ದರು.
- Saturday
- November 23rd, 2024