Ad Widget

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ವಿಚಾರ ಸಂಕಿರಣ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇದರ ವತಿಯಿಂದ ವಿಚಾರ ಸಂಕಿರಣ ಕಾರ್ಯಕ್ರಮವು ಕೊಡಗು ಸಂಪಾಜೆಯ “ಸಹಕಾರ ಭವನ” ಪಯಸ್ವಿನಿ ಪ್ರಾ.ಕೃ.ಪ.ಸ.ಸಂಘ ನಿ. ಇದರ ಸಭಾಂಗಣದಲ್ಲಿ ನಡೆಯಿತು.

. . . . .

ಅಕಾಡೆಮಿಯ ಅಧ್ಯಕ್ಷ ಲಕ್ಷೀನಾರಾಯಣ ಕಜೆಗದ್ದೆಯವರ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕ ಮಾತನಾಡಿದರು. ಅಕಾಡೆಮಿಯ ಮಾಜಿ ಅಧ್ಯಕ್ಷ ಯನ್.ಎಸ್ ದೇವಿ ಪ್ರಸಾದ್‌ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ| ಬಿ.ವಿ. ವಸಂತ ಕುಮಾರ್, “ಭಾಷಾ ಅಕಾಡೆಮಿಯ ಚಟುವಟಿಕೆಗಳ ಸ್ವರೂಪ ಮತ್ತು ಸಾಧ್ಯತೆಗ” ಮತ್ತು ಪೆರಾಜೆ ಪ್ರಾ.ಕೃ.ಪ.ಸ.ಸಂಘದ ಇದರ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ , “ಭಾಷೆ ಮತ್ತು ಸಂಸ್ಕೃತಿ ಉಳ್ಸುವಲ್ಲಿ ಸಮುದಾಯದ ಪಾತ್ರ” ಎಂಬ ವಿಷಯಗಳ ಬಗ್ಗೆ ವಿಚಾರ ಮಂಡನೆ ಮಾಡಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪಯಸ್ವಿನಿ ಪ್ರಾ.ಕೃ.ಪ.ಸ.ಸಂಘ ಇದರ ಅಧ್ಯಕ್ಷ ಯನ್.ಸಿ. ಅನಂತ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಕಾಡೆಮಿಯ ಸದಸ್ಯೆ ಬೈತಡ್ಕ ಜಾನಕಿ ಬೆಳ್ಯಪ್ಪರವರು ಪ್ರಾರ್ಥಿಸಿದರು. ಸದಸ್ಯ ಧನಂಜಯ ಅಗೋಳಿಕಜೆ ಸ್ವಾಗತಿಸಿ, ಗೆ ಪುರುಷೋತ್ತಮ ಕಿರ್ಲಾಯ ವಂದಿಸಿದರು. ಸದಸ್ಯ ಸಂಚಾಲಕ ಕುಸುಮಾಧರ ಎ.ಟಿ ಯವರು ಕಾರ್ಯಕ್ರಮ ನಿರೂಪಿಸಿದರು. ಅರೆಭಾಷಾಭಿಮಾನಿಗಳ, ಭಾಷಾ ವಿದ್ವಾಂಸರು, ಆಯೋಜಕರು, ಅಕಾಡೆಮಿಯ ಸದಸ್ಯರುಗಳು, ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!