ಪುಂಜಾಲಕಟ್ಟೆ ಬಿ.ಎಂ.ಎಸ್ ಬೆಳ್ತಂಗಡಿ ಮತ್ತು ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ ಮಜ್ದೂರ್ ಸಂಘ ಬೆಳ್ತಂಗಡಿ ಹಾಗೂ ಮುರುಘೇಂದ್ರ ಮಿತ್ರ ಮಂಡಳಿ ಹಾಗೂ ವನಿತಾ ಸಮಾಜ ಇದರ ಅಶ್ರಯದಲ್ಲಿ ಮುರುಘೇಂದ್ರ ಸಭಾ ಭವನ ಪುಂಜಾಲುಕಟ್ಟೆ ಇಲ್ಲಿ ರಬ್ಬರ್ ಟ್ಯಾಪರ್ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮ ಹಾಗೂ ಸಮಾಲೋಚನಾ ಸಭೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ರಬ್ಬರ್ ಉತ್ಪಾದಕರ ಸಂಘ ಮೂರ್ಜೆ ಇದರ ನಿರ್ದೇಶಕರಾದ ಜೋಸ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿ.ಪ ಸದಸ್ಯರಾದ ತುಂಗಪ್ಪ ಬಂಗೇರ ಅವರು ರಬ್ಬರ್ ಕಾರ್ಮಿಕರಿಗೂ ಇತರ ಕಾರ್ಮಿಕರಿಗೆ ಇರುವ ಸೌಲಭ್ಯಗಳಂತೆ ಪ್ರಯೋಜನ ಸಿಗುವಂತಾಗಬೇಕು.ಇದಕ್ಕಾಗಿ ಸಂಘಟನೆ ಬಹು ಅಗತ್ಯ. ಭಾರತೀಯ ಮಜ್ದೂರ್ ಸಂಘವು ಪ್ರಪಂಚದ ಅತೀ ದೊಡ್ಡ ಕಾರ್ಮಿಕ ಸಂಘಟನೆಯಾಗಿದ್ದು ಇದು ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಭಾರತದಾದ್ಯಂತ ಕೆಲಸ ಮಾಡುತಿದ್ದು ರಬ್ಬರ್ ಕಾರ್ಮಿಕರ ಸಮಸ್ಯೆಗಳಿಗಾಗಿ ತಾನು ಈ ಬಗ್ಗೆ ಪೂರ್ಣ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು .ಬಿ.ಎಂ.ಎಸ್ ನ ಬೆಳ್ತಂಗಡಿ ತಾಲೂಕು ಸಮಿತಿಯ ಅದ್ಯಕ್ಷರು ,ನ್ಯಾಯವಾದಿ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ಸ್ ಸಂಘದ ಗೌರವ ಸಲಹೆಗಾರಾದ ಉದಯ ಬಿ.ಕೆ ಅವರು ಭಾರತೀಯ ಮಜ್ದೂರ್ ಸಂಘದ ಚಿಂತನೆಗಳನ್ನು ವಿವರಿಸಿ ಕಾರ್ಮಿಕರು ಸಂಘಟಿತರಾಗುವಂತೆ ಕರೆ ನೀಡಿದರು. ಬಿಎಂಎಸ್ ಬೆಳ್ತಂಗಡಿ ತಾಲೂಕು ಪ್ರಧಾನ ಕಾರ್ಯದರ್ಶಿ ಮತ್ತು ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ರಬ್ಬರ್ ಟ್ಯಾಪರ್್ಸ ಮಜ್ದೂರ್ ಸಂಘದ ಸಂಚಾಲಕರಾದ ಜಯರಾಜ್ ಸಾಲಿಯಾನ್ ಅವರು ,ರಬ್ಬರ್ ಬೋರ್ಡ್ ನಿಂದ ಹಾಗೂ ಸರಕಾರದಿಂದ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳಾದ ,ಸ್ಕಾಲರ್ ಶಿಪ್ ,ವೈದ್ಯಕೀಯ ಹಾಗೂ ಇತರ ಸಹಾಯಧನ, ಇನ್ಶೂರೆನ್ಸ್ ಯೋಜನೆಗಳು ಶ್ರಮ ಯೋಗಿ ಪ್ರಧಾನ ಮಂತ್ರಿ ಪಿಂಚಣಿ ವ್ಯವಸ್ಥೆಗಳ ವಿವರ ಮಾಹಿತಿ ನೀಡಿ ಶೀಘ್ರ ಈ ಯೋಜನೆಗಳ ಪ್ರಯೋಜನಗಳನ್ನು ಪಡೆಯುವಂತೆ ಕರೆ ನೀಡಿದರು,ಮುರುಘೇಂದ್ರ ಮಿತ್ರ ಮಂಡಳಿಯ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿಯವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಟ್ಯಾಪರ್ ಮಜ್ದೂರ್ ಸಂಘದ ಜಿಲ್ಲಾಧ್ಯಕ್ಷರಾದ ಸುರೇಶ್ ದಯಾನಂದ್ ಟ್ಯಾಪರ್ ಮಜ್ದೂರ್ ಸಂಘದ ಕಾರ್ಯದರ್ಶಿಗಳಾದ ನಾಗರಾಜ್ ಮಾಚಾರು, ಖಜಾಂಜಿ ರಾಜ ಮಾಚಾರು,ಬೆಳ್ತಂಗಡಿ ತಾಲೂಕಿನ ಅದ್ಯಕ್ಷರಾದ ಯೋಗಿಸ್, ವೇದಿಕೆಯಲ್ಲಿದ್ದರು.
ಜಿಲ್ಲಾ ಸಮಿತಿಯ ಉಪ ಖಜಾಂಜಿ ನಾಗೇಂದ್ರ ಸಹಕರಿಸಿದರು. ,ಬೆಳ್ತಂಗಡಿ ತಾಲೂಕಿನ ಸಮಿತಿಯ ಕಾರ್ಯದರ್ಶಿ ಚಂದ್ರ, ತಾಲೂಕಿನ ಕಾರ್ಯಕಾರಿ ಸಮಿತಿಯ ಖಜಾಂಜಿ ಶ್ರೀಧರ್, ಉಪಾಧ್ಯಕ್ಷರಾದ ಸುರೇಶ್ ಮಡಂತ್ಯಾರು,ಅಜಿತ್,ಮುರುಗಾನಂದ(ರಾಜ),ದರ್ಮ,ರಾಮ.ಉಪಸ್ಥಿತರಿದ್ದರು.
ಬಂಟ್ವಾಳ ತಾಲೂಕಿನ ನಿಯೋಜಿತ ಅದ್ಯಕ್ಷರಾಗಿ ಮನೋಜ್,ಕಾರ್ಯದರ್ಶಿಯಾಗಿ ಅಶೋಕ, ಖಜಾಂಜಿಯಾಗಿ ಸುರೇಶ ಸ್ಥಾಪಕ ಅಧ್ಯಕ್ಷರಾಗಿ ಅನುರಂಜ್ ಆಯ್ಕೆಯಾಗಿದ್ದಾರೆ. ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಮತ್ತು ವನಿತಾ ಸಮಾಜ ಇವರು ಕಾರ್ಯಕ್ರಮ ನಡೆಸಲು ಸಭಾಭವನದ ದಾನಿಗಳಾಗಿದ್ದರು. ಭುವನೇಶ್ವರ ಕಾರಿಂಜ
ಸ್ವಾಗತಿಸಿ ನಿರೂಪಿಸಿದರು