ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜೀವನಾಧರಿತ ಧಾರವಾಹಿ ‘ಮಹಾನಾಯಕ’ ರಾಘವೇಂದ್ರ ಹುಣಸೂರು ಅವರ ನೇತೃತ್ವದಲ್ಲಿ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು. ಈಗಾಗಲೇ ಕರ್ನಾಟಕದಾದ್ಯಂತ ಸಂಚಲನಮೂಡಿಸಿದೆ. ನಾಡಿನಾದ್ಯಂತ ಅಂಬೇಡ್ಕರ್ ಅಭಿಮಾನಿಗಳು ‘ಮಹಾನಾಯಕ’ ಧಾರವಾಹಿಯನ್ನು ಮನೆ ಮನೆಗೆ ತಲುಪಿಸಿ ಎಲ್ಲರೂ ಅಂಬೇಡ್ಕರ್ ಅವರ ಜೀವನವನ್ನು ಅರಿಯಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತಿದ್ದಾರೆ. ಬಹುಶಃ ಇತಿಹಾಸದಲ್ಲೇ ಮೊದಲ ಬಾರಿಗೆ ಜನಸಾಮಾನ್ಯರು ಖಾಸಗಿ ವಾಹಿನಿಯ ಧಾರವಾಹಿ ಒಂದಕ್ಕೆ ಪ್ರಚಾರ ಕೊಡುತ್ತಿರುವುದು ಅನಿಸುತ್ತದೆ. ಈ ನಿಟ್ಟಿನಲ್ಲಿ ‘ಸಂಪಾಜೆ’ ಗ್ರಾಮದ ‘ಚೆಡಾವಿನಲ್ಲಿ’ ‘ಮಹನಾಯಕ’ ಧಾರಾವಾಹಿಯ ಫ್ಲೇಕ್ಸ್ ಅನ್ನು ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಅನಾವರಣಗೊಳಿಸಿ ‘ಮಹಾ ನಾಯಕ’ ಧಾರವಾಹಿ ನೋಡುವಂತೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿದರು. ನಂತರ ಸಭಾ ಕಾರ್ಯಕ್ರಮದಲ್ಲಿ ಗ್ರಾಮೀಣ ಮಟ್ಟದಲ್ಲಿ ದಲಿತರನ್ನು ಒಗ್ಗೂಡಿಸುವ ಹಾಗು ಸಮಿತಿಯ ಬಲವರ್ಧನೆಗೆ ಶ್ರಮಿಸುವ ಕಾರ್ಯದ ಕುರಿತು ಚರ್ಚಿಸಲಾಯಿತು. ಫ್ಲೆಕ್ಸ್ ಅನಾವರಣಗೊಳಿಸಿ, ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಸಂಚಾಲಕ ಹೆಚ್ ಎಲ್ ದಿವಾಕರ್ “ಬಾಬ ಸಾಹೇಬ್ ಅಂಬೇಡ್ಕರ್ ಎಲ್ಲಾ ಸಮೂದಾಯಕ್ಕು ಮಾದರಿ, ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವು ನೀವು ಸಾಗಬೇಕಿದೆ. ಅವರ ಆಶಯದಂತೆ ದಲಿತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಂಘಟನೆಯು ಸತತವಾಗಿ ಮೂರು ದಶಕಗಳಿಂದ ಒತ್ತು ನೀಡುತ್ತಿದ್ದು. ಶಿಕ್ಷಣದಿಂದ ಮಾತ್ರ ದಲಿತ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದರು. ಹಾಗು ಬಾಬ ಸಾಹೇಬ್ ಅಂಬೇಡ್ಕರ್ ಅವರ ಜೀವನಾಧರಿತ ಧಾರವಾಹಿಯನ್ನು ಮನೆಯವರೆಲ್ಲರೂ ಕೂತು ನೋಡಬೇಕು ಆ ಮೂಲಕ ಮಹಾನ್ ಚೇತನರನ್ನು ಅರಿಯುವ, ಅವರ ಆಶಯಗಳನ್ನು ತಿಳಿದುಕೊಳ್ಳುವ ಸದವಕಾಶ ಇದಾಗಿದೆ ಎಂದರು. ಈ ಸಂದರ್ಭ ದ.ಸಂ.ಸಮಿತಿಯ ಮಡಿಕೇರಿ ತಾಲೂಕು ಸಂಚಾಲಕ ದೀಪಕ್ ಎ.ಪಿ, ಸಂಪಾಜೆ ಹೋಬಳಿ ಚೆಡಾವಿನ ದ.ಸಂ ಸಮಿತಿಯ ಅಧ್ಯಕ್ಷ ಶಶಿಕುಮಾರ್, ಗೌರವ ಅಧ್ಯಕ್ಷ ಚೋಮ, ಕಾರ್ಯದರ್ಶಿ ಸಂತೋಷ್ ಕುಮಾರ್ ಹೆಚ್ ಬಿ, ಪಿ ಕೆ ಇಸ್ಮಾಯಿಲ್, ಸುಂದರ, ಮಾಧವ, ನಾರಾಯಣ, ವಸಂತ, ತೀರ್ಥರಾಮ, ಅಶ್ವಥ್, ಗಣೇಶ್, ಸಚೀನ್, ಸರೋಜಾ, ಕಾವೇರಿ, ಗೌರಿ, ಚಂದ್ರಾವತಿ, ಮೋಹನ, ಹಾಗೂ ಕಾರ್ಯಕರ್ತರು ಹಾಜರಿದ್ದರು.
- Thursday
- November 21st, 2024