ಕರ್ನಾಟಕ ರಸ್ತೆ ಸಾರಿಗೆ ನಿಗಮ ಪುತ್ತೂರು ಘಟಕದಿಂದ ಈ ಮೊದಲು ಬೆಳಿಗ್ಗೆ 8-10,9-30,ಅದಲ್ಲದೇ ಮಧ್ಯಾಹ್ನ 1.15 ಸಾಯಂಕಾಲ 4.15,ಮತ್ತು5-45ಕ್ಕೆ ಪುತ್ತೂರು ಬೆಳ್ಳಾರೆ , ಪಂಜಿಗಾರು, ಕಲ್ಲಪಣೆ, ಪೊಟ್ರೆಗೆ ಸಾರಿಗೆ ವ್ಯವಸ್ಥೆ ಇದ್ದು, ಲಾಕ್ಡೌನ್ ಸಮಯದಿಂದ ಸಾರಿಗೆ ವ್ಯವಸ್ಥೆ ನಿಲ್ಲಿಸಿದ್ದು ಆ ನಂತರ ಲಾಕ್ಡೌನ್ ಸಡಿಲಿಕೆ ಆದರೂ ಕೂಡ ಕೊಡಿಯಾಲ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಇಲ್ಲದೇ ಶಾಲಾ ಕಾಲೇಜು ಹಾಗೂ ದಿನನಿತ್ಯದ ಜೀವನೋಪಾಯಕ್ಕೆ ಬೇರೆ ಸ್ಥಳಕ್ಕೆ ತೆರಳಳು ಕಷ್ಟ ಸಾಧ್ಯ ಹಾಗೂ ಖಾಸಗಿ ವಾಹನಗಳನ್ನು ಅವಲಂಬಿಸುವುದು ಅನಿವಾರ್ಯ ಆಗಿರುವುದರಿಂದ ಅತೀ ಶೀಘ್ರದಲ್ಲಿ ಈ ಮಾರ್ಗದಲ್ಲಿ ಪುನಃ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಇಂದು ಕೊಡಿಯಾಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೂಲಕ ಮನವಿಯನ್ನು ವಿಭಾಗೀಯ ನಿಯಂತ್ರಣಾಧಿಕಾರಿಗಳು ಪುತ್ತೂರು ಇವರಿಗೆ ಸಲ್ಲಿಸಲಾಯಿತು . ಈ ಮನವಿಯನ್ನು ಸಂತೋಷ್ ನಾಯಕ್, ನಿಶ್ಚಿತ್ ಶಾಂತಿಗುಡ್ಡೆ, ಚಂದ್ರಶೇಖರ್ ಕಲ್ಲಗದ್ದೆ ಸಲ್ಲಿಸಿದರು.
- Friday
- November 22nd, 2024