Ad Widget

ಪ್ರಭಾಕರರವರ ಮೃತದೇಹವನ್ನು ದೂರದ ಕೇರಳದಲ್ಲಿ ಇರುವ ಕುಟುಂಬಸ್ಥರಿಗೆ ತಲುಪಿಸುವಲ್ಲಿ ಸಹಕಾರಿಯಾದ ಮುಸ್ಲಿಂ ಬಾಂಧವರು

ಪ್ರಭಾಕರ್ ಎಂಬವರು ಸುಳ್ಯ ತಾಲೂಕಿನ ಕಲ್ಲುಗುಂಡಿಯ ಕೂಲಿಶೆಡ್ ನಲ್ಲಿ ಬಾಡಿಗೆ ರೂಮ್ ಮಾಡಿಕೊಂಡು ಸುಮಾರು 40 ವರ್ಷಗಳಿಂದ ಸುಳ್ಯ ತಾಲೂಕಿನ ವಿವಿಧೆಡೆ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ರೂಮಿನಲ್ಲಿ ಒಬ್ಬನೇ ವಾಸಿಸುತ್ತಿದ್ದು ,ತಮ್ಮ ,ಕುಟುಂಬಸ್ಥರು ದೂರದ ಕೇರಳ ರಾಜ್ಯದ ಆಲಪುಯದಲ್ಲಿ ವಾಸಿಸುತ್ತಿದ್ದರು. ಪ್ರಭಾಕರ್ ರವರು ಆಗಿಂದಾಗ ಕೇರಳದ ತಮ್ಮ ಊರಿಗೆ ಹೋಗಿ ಬಟ್ಟೆಗಳನ್ನು ಮಾರಾಟಕ್ಕೆ ತಂದು ಕಂತಿನ ರೂಪದಲ್ಲಿ ಸುಳ್ಯ ತಾಲೂಕಿನ ಪ್ರದೇಶಗಳಲ್ಲಿ ವ್ಯಾಪಾರ ನಡೆಸುತ್ತಿದ್ದರು. ಅಕ್ಟೋಬರ್ 2ರಂದು ಊರಿಗೆ ತೆರಳಲು ಸಿದ್ಧರಾಗಿದ್ದ ಇವರು ತಮ್ಮ ಬಳಿ ಬಟ್ಟೆ ಖರೀದಿಗೆ ಇಟ್ಟಿದ್ದ ಹಣವನ್ನು ಬ್ಯಾಂಕ್ ಮೂಲಕ ಕೇರಳಕ್ಕೆ ಕಳುಹಿಸಿದ್ದರು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಅಕ್ಟೋಬರ್ 1ರಂದು ರಾತ್ರಿ ಇವರಿಗೆ ಎದೆನೋವು ಕಾಣಿಸಿದೆ. ಸ್ಥಳೀಯರಿಂದ ವಿಷಯ ತಿಳಿದ ಸಂಪಾಜೆ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ಜಿ ಕೆ ಹಮೀದ್, ಹಾಗೂ ಸುಳ್ಯ ತಾಲ್ಲೂಕು ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ತಾಜ್ ಮಹಮ್ಮದ್, ಕಲ್ಲುಗುಂಡಿ ಜಮಾತ್ ಸದಸ್ಯ ಹಸೈನಾರ್ ಕಲ್ಲುಗುಂಡಿ ಇವರ ತಂಡವು ಸುಳ್ಯ ನಗರ ಪಂಚಾಯತ್ ಸದಸ್ಯ ಕೆ ಎಸ್ ಉಮ್ಮರ್ ರವರಿಗೆ ಈ ವಿಷಯವನ್ನು ತಿಳಿಸಿ ಸ್ಪಂದಿಸುವಂತೆ ಮಾಹಿತಿ ನೀಡಿದ ಸಂದರ್ಭ ಉಮ್ಮರ್ ರವರು ತಮ್ಮ ಸಹ ಮಿತ್ರರಾದ ಕಬೀರ್ ಕಲ್ಲುಮುಟ್ಲು ರವರ ಮುಖಾಂತರ ಸುಳ್ಯ ಕೆವಿಜಿ ಆಸ್ಪತ್ರೆಗೆ ಅವರನ್ನು ದಾಖಲಿಸಿದರು. ಆದರೆ ಪ್ರಭಾಕರ್ ರವರು ಅದಾಗಲೇ ನಿಧನರಾಗಿರುವುದಾಗಿ ತಪಾಸಣೆ ನಡೆಸಿದ ವೈದ್ಯರು ತಿಳಿಸಿದ್ದಾರೆ..ದೂರದ ಕೇರಳದ ಆಲಪುಯ ನಿವಾಸಿಯಾಗಿದ್ದ ಇವರ ಸಂಬಂಧಿಕರ ವಿಳಾಸವನ್ನು ಪತ್ತೆ ಹಚ್ಚಿದ ಈ ತಂಡವು ಕುಟುಂಬಸ್ಥರಿಗೆ ಮಾಹಿತಿ ತಿಳಿಸುವಲ್ಲಿ ಸಫಲರಾದರು. ಮೃತದೇಹದ ವಾರಸುದಾರರು ಯಾರು ಇಲ್ಲದ ಕಾರಣ ಮೃತದೇಹವನ್ನು ಕೆವಿಜಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಯಿತು. ಮಾರನೆಯ ದಿನ ಅಕ್ಟೋಬರ್ 2ರಂದು ಈ ತಂಡವು ಸುಳ್ಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಮೃತ ದೇಹದ ಕಾನೂನಿನ ಕಾರ್ಯ ನಡೆಸಿ ಕೊಡುವಂತೆ ವಿನಂತಿಸಿದರು. ಇವರ ಮನವಿ ಮೇರೆಗೆ ಸ್ಪಂದಿಸಿದ ಪೊಲೀಸ್ ಅಧಿಕಾರಿಗಳು ಮೃತದೇಹದ ಕಾನೂನು ಕಾರ್ಯವನ್ನು ಪೂರೈಸಿದರು. ಬಳಿಕ ಗಾಂಧಿನಗರ ಅಚ್ಚು ಅಶ್ರಫ್ ಪ್ರಗತಿ ರವರ ಆಂಬುಲೆನ್ಸ್ ವಾಹನದಲ್ಲಿ ಪ್ರಭಾಕರ್ ರವರ ಮೃತದೇಹವನ್ನು ಕೇರಳ ರಾಜ್ಯದ ಆಲಪುಯ ಜಿಲ್ಲೆಯ ಅವರ ಮನೆಯವರಿಗೆ ತಲುಪಿಸುವಲ್ಲಿ ಯಶಸ್ವಿಯಾದರು. ಇವರ ಈ ಮಾನವೀಯ ಸೇವೆಯು ಸೌಹಾರ್ದತೆಗೆ ಸಾಕ್ಷಿಯಾಯಿತು. ಸ್ಥಳೀಯರು ಇವರ ಈ ಕಾರ್ಯವನ್ನು ಶ್ಲಾಘಿಸಿದರು.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!