Ad Widget

ಗಾಂಧಿನಗರ ಜುಮಾ ಮಸ್ಜಿದ್ ಅನುಸ್ಮರಣೆ ಹಾಗೂ ಪ್ರಾರ್ಥನಾ ಸಂಗಮ

ಮುಹಿಯುದ್ದೀನ್ ಜುಮ್ಮಾ ಮಸ್ಜಿದ್ ತರ್ಬೀಯ್ಯತುಲ್ ಇಸ್ಲಾಂ ಜಮಾಅತ್ ಕಮಿಟಿಯ ಗಾಂಧಿನಗರ ,ಅನ್ಸಾರುಲ್ ಮುಸ್ಲಿಮೀನ್ ಎಸೋಸಿಯೇಶನ್ ರಿ, ಅನ್ಸಾರಿಯ ಎಜುಕೇಷನ್ ಸೆಂಟರ್ ರಿ, ಸುಳ್ಯ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಿಧನರಾದ ತಾಜುಲ್ ಫುಖಹಾ ಬೇಕಲ ಉಸ್ತಾದ್ , ಗಾಂಧಿನಗರ ಜುಮಾ ಮಸ್ಜಿದ್ ಸಮಿತಿಯ ಅಧ್ಯಕ್ಷ ಹಾಜಿ ಎಸ್.ಅಬ್ದುಲ್ಲಾ ಮಲ್ನಾಡ್ ಪುತ್ತೂರು ತಾಲೂಕು ಸಂಯುಕ್ತ ಜಮಾಅತಿನ ಸ್ಥಾಪಕಾಧ್ಯಕ್ಷ ಹಾಜಿ ಯಸ್ ಇಬ್ರಾಹಿಂ ಕಮ್ಮಾಡಿ,ಹಾಜಿ ಎಸ್ ಎ ಮಮ್ಮುಂಞಿ ರವರ ಅನುಷ್ಮರಣೆ ಹಾಗೂ ಪ್ರಾರ್ಥನಾ ಸಂಗಮ ಗಾಂಧಿನಗರ ಮದ್ರಸ ಸಭಾಂಗಣದಲ್ಲಿ ಅ.3.ರಂದು ನಡೆಯಿತು .

. . . . . . . . .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಜಮಾಅತ್ ಕಮಿಟಿಯ ಉಪಾಧ್ಯಕ್ಷ ಹಾಜಿ ಆದಂ ಕುಂಞಿ ಕಮ್ಮಾಡಿ ವಹಿಸಿದ್ದರು.ಪ್ರಾಥನಾ ಸಂಗಮ ಕಾರ್ಯಕ್ರಮದ ಉದ್ಘಾಟನೆಯನ್ನು ಅಸ್ಸಯ್ಯದ್ ಕುಂಞಿ ಕೋಯ ತಂಙಳ್ ನಾವೂರು ನೆರವೇರಿಸಿದರು.ಮುಖ್ಯ ಪ್ರಭಾಷಣ ಮಾಡಿದ ಗಾಂಧಿನಗರ ಮಸ್ಜಿದ್ ನ ಖತೀಬರಾದ ಅಲ್ ಹಾಜ್ ಅಶ್ರಫ್ ಕಾಮಿಲ್ ಸಖಾಫಿ ಅಗಲಿದ ಉಲಮಾ ಉಮರಾ ನಾಯಕರು ಸಾಮಾಜಕ್ಕಾಗಿ, ತಮ್ಮ ಧಾರ್ಮಿಕ ಕೇಂದ್ರಗಳಿಗೆ,ಬಡವರ ಸಹಾಯಕ್ಕಾಗಿ ಅವರು ಸಾಗಿಸಿದ ಜೀವನದ ಕುರಿತು ಮಾತನಾಡಿ ಅವರ ಮರಣಾನಂತರದ ಜೀವನ ಸ್ವರ್ಗೀಯ ವಾಗಿರಲಿ ಎಂದು ದುವಾ ಮಾಡಿದರು.ದ.ಕ.ಜಿಲ್ಲಾ ವಕ್ಫ್ ಮಂಡಳಿ ಸದಸ್ಯ ಹಾಜಿ ಮುಸ್ತಫಾ ಜನತಾ ಅಗಲಿದ ಗಣ್ಯರಿಗೆ ಸಂತಾಪ ನುಡಿಗಳನ್ನಾಡಿದರು. ಅನ್ಸಾರಿಯ ಎಜುಕೇಷನ್ ಸೆಂಟರ್ ನ ಮುದರ್ರಿಸ್ ಅಬೂಬಕರ್ ಸಖಾಫಿ ಮಾತನಾಡಿ ಹಿರಿಯ ಮುಖಂಡರುಗಳು ತೋರಿಸಿ ಕೊಟ್ಟ ಸತ್ಯಮಾರ್ಗದತ್ತ ಹೆಜ್ಜೆ ಇಟ್ಟು ನಡೆಯುವಂತೆ ಹಿತ ನುಡಿಗಳನ್ನಾಡಿದರು.

. . . . . . .

ವೇದಿಕೆಯಲ್ಲಿ ಉಮರಾ ನಾಯಕರುಗಳಾದ ಹಾಜಿ ಮಜೀದ್ ಜನತಾ, ಹಾಜಿ ಐ ಇಸ್ಮಾಯಿಲ್ ,ಹಾಜಿ ಅಬ್ದುಲ್ಲ್ ಹಮೀದ್ ಜನತಾ,ಹಾಜಿ ಅಬ್ದುಲ್ ಶುಕೂರ್ ಮೊದಲಾದವರು ಉಪಸ್ಥಿತರಿದ್ದರು.ದುವಾ ನೇತೃತ್ವವನ್ನು ಸೈಯದ್ ಕುಂಞಿಕೋಯ ಸಹದಿ ತಂಙಳ್ ನೆರವೇರಿಸಿದರು.ಸದರ್ ಮುಅಲ್ಲಿಂ ಇಬ್ರಾಹಿಂ ಸಖಾಫಿ ಪುಂಡೂರು ಸ್ವಾಗತಿಸಿ , ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading