ಸಂಪಾಜೆ ವಲಯ ಕಾಂಗ್ರೆಸ್ ಸಭೆಯು ಕಲ್ಲುಗುಂಡಿ ಸೊಸೈಟಿ ಸಭಾಭವನದಲ್ಲಿ ನಡೆಯಿತು ಸಭೆಯಲ್ಲಿ ಪ್ರಮುಖವಾಗಿ ಉತ್ತರಪ್ರದೇಶದಲ್ಲಿ ಹತ್ರಾಸೋ ಬಳಿ ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರ ಘಟನೆಯನ್ನು ಖಂಡಿಸಿ ಹಾಗೂ ಕಾಂಗ್ರೆಸ್ ರಾಷ್ಟ್ರನಾಯಕರಾದ ರಾಹುಲ್ ಗಾಂಧಿ ಪ್ರಿಯಾಂಕ ಗಾಂಧಿಯವರ ಬಗ್ಗೆ ಉತ್ತರಪ್ರದೇಶ ಪೊಲೀಸರು ನಡೆದುಕೊಂಡ ರೀತಿಯನ್ನು ಖಂಡಿಸಿ ನಿರ್ಣಯವನ್ನು ಮಾಡಲಾಯಿತು.
ಗಾಂಧಿ ಜಯಂತಿ ಹಾಗೂ ಶಾಸ್ತ್ರಿ ಜಯಂತಿ ಕಾರ್ಯಕ್ರಮ ಮಾಡಲಾಯಿತು. ಮುಂದಿನ ಗ್ರಾಮ ಪಂಚಾಯತ್ ಚುನಾವಣೆಗೆ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ ರಚಿಸಲಾಯಿತು. ಸಭೆಯ ಅಧ್ಯಕ್ಸತೆಯನ್ನು ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸೋಮಶೇಖರ್ ಕೆ. ಆರ್. ವಹಿಸಿದ್ದರು. ಸಭೆಯಲ್ಲಿ ಪಕ್ಷ ಸಂಘಟನೆ ಬಗ್ಗೆ ಚರ್ಚಿಸಲಾಯಿತು ಮುಖಂಡರುಗಳಾದ ಮಹಮದ್ ಕುಂಞ ಗೂನಡ್ಕ, ಹಮೀದ್ ಜಿ. ಕೆ. ಯಮುನಾ, ಕಾಂತಿ ಬಿ. ಎಸ್., ಸುಂದರಿ ಮುಂಡಡ್ಕ, ಸುಮತಿ, ರಾಜು ನೆಲ್ಲಿಕುಮೇರಿ, ಅಶ್ರಫ್ ಕೆ. ಎಂ., ತಾಜ್ ಮಹಮದ್, ಅಬ್ದುಲ್ಲ ದರ್ಕಸ್ತು, ಹನೀಫ್ ಎಸ್.ಕೆ., ಹನೀಫ್ ಎ. ಕೆ., ಅಬೂಸಾಲಿ ಪಿ. ಕೆ. ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು