ಹಿಂದೂ ಜಾಗರಣಾ ವೇದಿಕೆ ಶ್ರೀ ಮಹಾವಿಷ್ಣು ಘಟಕ ಕಣ್ಕಲ್, ಕೇನ್ಯ ಇದರ ವತಿಯಿಂದ ಶ್ರೀ ನರೇಂದ್ರ ಮೋದಿಯವರ ಸ್ವಚ್ಚ ಭಾರತ ಪರಿಕಲ್ಪನೆಯಂತೆ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಅಂಗವಾಗಿ ಸ್ವಚ್ಚತಾ ಅಭಿಯಾನ ಕೇನ್ಯದಲ್ಲಿ ಅ. 02 ರಂದು ನಡೆಯಿತು.
ಕೇನ್ಯ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬೆಳಿಗ್ಗೆ ಗಂಟೆ 9.00ರಿಂದ ಸಂಜೆ ಗಂಟೆ 3.30ರ ವರೆಗೆ ಪ್ಲಾಸ್ಟಿಕ್ ಮತ್ತು ಬಾಟಲಿ ಹೆಕ್ಕಿ ಸ್ವಚ್ಚಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಹಿಂದೂ ಜಾಗರಣ ವೇದಿಕೆಯ 30 ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದರು.