Ad Widget

ಅ.12 ರಿಂದ ಪಂಜದಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ

ಪ್ರಧಾನಿ ಮೋದಿಯವರ ಆಲೋಚನೆಯಾದ ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ಪೂರಕವಾಗಿ ಪಂಜದ ಸುತ್ತ ಮುತ್ತಲಿನ ಜನರಿಗೆ ಸಹಕಾರಿಯಾಗಲೆನ್ನುವ ಉದ್ದೇಶದಿಂದ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ದ ವಠಾರದಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ಅ.12 ರಿಂದ 17 ರ ವರೆಗೆ ನಡೆಯಲಿದೆ. ಒಬ್ಬ ವ್ಯಕ್ತಿಗೆ ಒಂದು ವಿಷಯದ ಬಗ್ಗೆ ಮಾತ್ರ ತರಬೇತಿ ಪಡೆದುಕೊಳ್ಳಲು ಅವಕಾಶ. ತರಬೇತಿ ಪಡೆದುಕೊಂಡ ಎಲ್ಲರಿಗೂ ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು ವತಿಯಿಂದ ಅಧಿಕೃತ ತರಬೇತಿ ಪ್ರಮಾಣ ಪತ್ರ ನೀಡಲಾಗುವುದು ಹಾಗೂ ಇಲ್ಲಿ ಕೃಷಿ ಯಂತ್ರೋಪಕರಣ ದುರಸ್ತಿ, ವಿದ್ಯುತ್ ಉಪಕರಣ ದುರಸ್ತಿ, ಪ್ಲಂಬಿಂಗ್, ಇಲೆಕ್ಟ್ರಿಷಿಯನ್ , ಫ್ಯಾಷನ್ ಡಿಸೈನಿಂಗ್ , ಫುಡ್ ಟೆಕ್ನಾಲಜಿ , ಕೃಷಿ, ಕಸಿ ಕಟ್ಟುವುದು, ಜೇನು ಕೃಷಿ, ಹೈನುಗಾರಿಕೆ, ಕೋಳಿ ಮತ್ತು ಕುರಿ ಸಾಕಾಣೆ, ಮೊಬೈಲ್ ಫೋನ್ ದುರಸ್ತಿ ತರಬೇತಿ ನೀಡಲಾಗುವುದು ಹಾಗೂ ಹೆಚ್ಚಿನ ಮಾಹಿತಿಗಾಗಿ 91081 23914, 9964184165, 94495 10575, 90080 80080, 98806 49976 ಸಂಖ್ಯೆ ಗೆ ಕರೆಮಾಡಬಹುದು ಎಂದು ಸಂಘಟಕರು ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading