

ಕಲ್ಲುಗುಂಡಿಯ ಗೂನಡ್ಕ ಬಳಿ ಬೈಕೊಂದಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ ಕಾರ್ ಒಂದನ್ನು ಮರ್ಕಂಜದಲ್ಲಿ ಲಕ್ಷ್ಮೀಶ್ ಪಾಲ್ತಾಡು ತಡೆಹಿಡಿದು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ನಡೆದಿದೆ. ಇದಕ್ಕೆ ಅರಂತೋಡಿನ ರಿಕ್ಷಾ ಚಾಲಕ ಮಾಲಕರಾದ ವಿಜಯಕುಮಾರ್ ನಾಯ್ಕ್ ಮತ್ತು ಮುರಳೀಧರ ಸೂoತೋಡು ಸಹಕರಿಸಿದ್ದಾರೆ. ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.