Ad Widget

ಸಂಪಾಜೆ ಮತ್ತು ಭಾಗಮಂಡಲ ಮೀಸಲು ಅರಣ್ಯದಲ್ಲಿ ಕಡವೆ ಹತ್ಯೆ – ಆರೋಪಿಗಳ ಬಂಧನ


ಮಡಿಕೇರಿ ವಿಭಾಗದ ಭಾಗಮಂಡಲ ವಲಯ ವ್ಯಾಪ್ತಿಗೆ ಬರುವ ಪಟ್ಟಿಘಾಟ್ ಮೀಸಲು ಅರಣ್ಯದ ಡೆಂಕಲ್ ಎಂಬಲ್ಲಿ ಕಡವ ಹತ್ಯೆ ಸಂಬಂಧವಾಗಿ ಪ್ರಭಾಕರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮಡಿಕೇರಿ ವಿಭಾಗ , ಹಾಗೂ ನಿಲೇಶ್ ಸಿಂಧೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು , ಮಡಿಕೇರಿ ಉಪ ವಿಭಾಗ ಇವರ ಮಾರ್ಗದರ್ಶನದಲ್ಲಿ ಸಂಪಾಜೆ ವಲಯ ಅರಣ್ಯಾಧಿಕಾರಿ ಮಧುಸೂದನ್ ಹಾಗೂ ಭಾಗಮಂಡಲ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಎಂ.ಎನ್. ನೇತೃತ್ವದಲ್ಲಿ ಪಿ.ಜೆ ರಾಘವ , ಉಪ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ವಿವಿಧ ತಂಡಗಳಾಗಿ ತನಿಖೆ ನಡೆಸಿ ಕಡವೆ ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ .

. . . . .

ಬಂಧಿತರಿಂದ 25 ರಿಂದ 30 ಕೆ.ಜೆ ಕಡವೆಯ ಒಣ ಮಾಂಸ , ಕಡವೆಯ ಕೊಂಬು , ಚರ್ಮ ಹಾಗೂ ಅಕ್ರಮ ಬೇಟೆಗೆ ಉಪಯೋಗಿಸಿದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಯಿತು . ಆರೋಪಿಗಳಾದ ತಾವೂರು ಗ್ರಾಮದ ಸತೀಶ್.ಕೆ.ಎಂ, ಅನಿಲ್ ಕುಮಾರ್.ಕೆ.ಸಿ, ಬಾಲಕೃಷ್ಣ.ಸಿ.ಎಂ., ರಾಘವೇಂದ್ರ.ಕೆ. ಬಂಧಿಸಲಾಗಿದ್ದು, ಒರ್ವ ಆರೋಪಿ ಚೆಂಬು ಗ್ರಾಮದ ಕುಮಾರ್ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಕಾರ್ಯಚರಣೆಯಲ್ಲಿ ಸಿಬ್ಬಂದಿಗಳಾದ ಜೋಯಪ್ಪ , ಪುನೀತ್ ಎಂ.ಎಸ್ , ಪುನೀತ್.ಕೆ , ಶ್ರೀಮತಿ ತಿಲಕ , ಪಿ.ಡಿ ಜನಾರ್ಧನ , ಚಂದ್ರಪ್ಪ ಬಣಕಾರ್ , ನಾಗರಾಜ್ , ಕಾರ್ತಿಕ್‌.ಡಿ , ಕೂಸಪ್ಪ, ಭರತ , ಶರೀಫ್, ಶಿವಪ್ರಸಾದ್ ಮತ್ತು ಅಮೃತೇಶ್‌ ಬಿ.ಬಿ ಉಪ ವಲಯ ಅರಣ್ಯಾಧಿಕಾರಿ , ತೊಡಿಕಾನ ಉಪ ವಲಯ ಇವರ ಸಿಬ್ಬಂದಿಗಳಾದ ಭಿರಾ ಗೌಡ ರವಿ.ಎಂ.ಎಸ್ , ಗಣೇಶ್ ಮತ್ತು ಸುದೀ‌ರ್ ಜಿ.ಪಿ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!