ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಬಿಳಿನೆಲೆ ಶಾಲೆಗೆ ಕಂಪ್ಯೂಟರ್ ಮಾನಿಟರ್ ಕೊಡುಗೆ

ಸುಬ್ರಹ್ಮಣ್ಯ ಅಕ್ಟೋಬರ್ 28 : “ಇಂದಿನ ಆಧುನಿಕ ಯುಗದಲ್ಲಿ ಕಂಪ್ಯೂಟರ್ ಶಿಕ್ಷಣ ಇಲ್ಲ ಅಂದ್ರೆ ಏನನ್ನು ಸಾಧಿಸಲಾಗದು. ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯ ಜೀವನವನ್ನು ರೂಪಿಸಿಕೊಳ್ಳುವಲ್ಲಿ ಪ್ರಾಥಮಿಕ ಹಂತದಿಂದಲೇ ಕಂಪ್ಯೂಟರ್ ಶಿಕ್ಷಣದ ಅಭ್ಯಾಸವನ್ನು ಮಾಡಬೇಕಾಗುತ್ತದೆ. ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ರೋಟರಿ ಕ್ಲಬ್ ಶಾಲೆಗಳಿಗೆ ಬೇಕಾಗುವ ಮೂಲಭೂತ ಸೌಕರ್ಯವನ್ನು ಗುರುತಿಸಿ ತನ್ನ ಕೊಡುಗೆಯನ್ನು ನೀಡುತ್ತಾ ಬಂದಿದೆ. ಇಂದು ಸರಕಾರಿ ಶಾಲೆಗಳು ಎಲ್ಲಾ ಸೌಕರ್ಯಗಳನ್ನು ಹೊಂದಿದ್ದು ಖಾಸಗಿ ಶಾಲೆ ಗಳಿಗಿಂತ ಮುಂಚೂಣಿಯಲ್ಲಿ ಇರುವುದು ಸಂತೋಷ ತಂದಿದೆ ” ಎಂದು ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ರೋಹಿತ್ ಬಿ.ಬಿ ನುಡಿದರು.

. . . . . . . . .

 ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಬುಧವಾರ ಬಿಳಿನೆಲೆ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್ ಮಾನಿಟರ್ ಅನ್ನು ಕೊಡುಗೆಯಾಗಿ ನೀಡಿ ಅವರು ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು.

. . . . . . .

ವೇದಿಕೆಯಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ನಿಕಟ ಪೂರ್ವ ಅಧ್ಯಕ್ಷ ಜಯಪ್ರಕಾಶ್, ಪೂರ್ವ ಅಧ್ಯಕ್ಷರುಗಳಾದ ವಿಶ್ವನಾಥ ನಡುತೋಟ, ಗೋಪಾಲ ಎಣ್ಣೆಮಜಲು, ಶಾಲಾ ಎಸ್ ಡಿ ಎನ್ ಸಿ ಅಧ್ಯಕ್ಷ ಯಶೋಧರ ಗೌಡ, ಮುಖ್ಯ ಶಿಕ್ಷಕಿ ಭುವನೇಶ್ವರಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಎಸ್ ಡಿ ಎಂ ಸಿ ಉಪಾಧ್ಯಕ್ಷ ರೇಖಾ, ಶಿಕ್ಷಕರುಗಳಾದ ಸುನಂದ, ಮೋಹಿನಿ, ಕ್ಷಮಾ, ಲೋಹಿತ್, ರೇವತಿ ಹಾಗೂ ಪೋಷಕರಾದ ಭವ್ಯ, ಭವಾನಿ,ದಿವ್ಯ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ವಿಶ್ವನಾಥ ನಡುತೋಟ ನಿರೂಪಿಸಿದ ಕಾರ್ಯಕ್ರಮದಲ್ಲಿ ಗೋಪಾಲ ಎಣ್ಣೆ ಮಜಲ್ ಸ್ವಾಗತಿಸಿ ಜಯಪ್ರಕಾಶ್ ಪ್ರಸ್ತಾವನೆಗೈದು ಭುವನೇಶ್ವರಿ ಧನ್ಯವಾದ ಸಮರ್ಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading