ಸೆ.05ರಂದು ಸುಳ್ಯದಲ್ಲಿ ಪ್ರಜಾಸೇವೆ ಅಭಿಯಾನ ಸಭೆ

ಸುಳ್ಯ : ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಅವುಗಳಿಗೆ ಸಕಾಲದಲ್ಲಿ ಸೂಕ್ತ ಪರಿಹಾರ ಒದಗಿಸುವ ಉದ್ದೇಶದಿಂದ ರಾಜ್ಯಾದ್ಯಂತ ಪ್ರಜಾಸೇವೆ ಅಭಿಯಾನ ಸಭೆಗಳನ್ನು ಆಯೋಜಿಸಲಾಗುತ್ತಿದೆ. ಸರ್ಕಾರದ ಸುತ್ತೋಲೆಗಳಂತೆ ಪ್ರತೀ ಜಿಲ್ಲೆಯಲ್ಲೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಪ್ರತೀ ತಿಂಗಳ ಎಲ್ಲಾ ಶನಿವಾರಗಳಂದು ಪ್ರಜಾಸೇವೆ ಅಭಿಯಾನ ಸಭೆಗಳನ್ನು ನಡೆಸಲು ಮಾರ್ಗಸೂಚಿ ನೀಡಲಾಗಿದೆ. ಇದರಂತೆ ರಾಜ್ಯಾದ್ಯಂತ ಪ್ರಜಾಸೇವೆ...

ಗುತ್ತಿಗಾರಿನ ಬ್ಲೆಸ್ಡ್ ಕುರಿಯಕೋಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ಕರಾಟೆ ಸ್ಪರ್ಧೆ

ಕರ್ನಾಟಕ ಸರ್ಕಾರ, ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ,ಸುಳ್ಯ ಇವರ ಸಹಯೋಗದಲ್ಲಿ 2026-27ನೇ ಸಾಲಿನ ಕ್ಷೇತ್ರ ಮಟ್ಟದ ಕರಾಟೆ ಕ್ರೀಡಾ ಕೂಟವನ್ನು ಗುತ್ತಿಗಾರಿನ ಬ್ಲೆಸ್ಡ್ ಕುರಿಯಕೋಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಆ.27ರಂದು ಯಶಸ್ವಿಯಾಗಿ ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ರಾಜೇಶ್ ಮಾವಿನಕಟ್ಟೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಳ್ಯ ತಾಲೂಕು...
Ad Widget

ಇಂದಿನ(ಸೆಪ್ಟೆಂಬರ್ 03) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ರಬ್ಬರ್ ಧಾರಣೆಯಲ್ಲಿ ಮತ್ತೆ ಇಳಿಕೆ ; ಅಡಿಕೆ, ಕಾಳುಮೆಣಸು ಹಾಗೂ ಕೊಬ್ಬರಿ ದರ ಯಥಾಸ್ಥಿತಿ..! – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ದಿನಾಂಕ : 03 ಸೆಪ್ಟೆಂಬರ್ 2026ವಾರ : ಗುರುವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಸೆಪ್ಟೆಂಬರ್ 03) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ...

ದೇವಚಳ್ಳ : ಗ್ರಾಮ ಸಹಾಯಕ ದೀಪಕ್ ಆತ್ಮಹತ್ಯೆ

ದೇವಚಳ್ಳ ಗ್ರಾಮ ಆಡಳಿತಾಧಿಕಾರಿ ಕಚೇರಿಯಲ್ಲಿ ಗ್ರಾಮ ಸಹಾಯಕರಾಗಿರುವ ಎಡಮಂಗಲ ನಿವಾಸಿ ದೀಪಕ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ವರದಿಯಾಗಿದೆ. ಎಡಮಂಗಲದ ಪುಳಿಕುಕ್ಕು ನಲ್ಲಿರುವ ಮನೆಯ ಸಮೀಪದಲ್ಲಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಅವರ ಪತ್ನಿ ತಾಯಿ ಮನೆ ಕಡಬದಲ್ಲಿ ಇದ್ದರೆನ್ನಲಾಗಿದೆ. ಮೃತರು ಪತ್ನಿ ಮಲ್ಲಿಕಾ, ಪುತ್ರಿ ಯದುವಿ ಹಾಗೂ ಸಹೋದರರನ್ನು ಅಗಲಿದ್ದಾರೆ. ಪೋಲೀಸರು...

ದ್ವಾದಶ ರಾಶಿಗಳ ದಿನಭವಿಷ್ಯ – ದಿನಾಂಕ : 03-09-2026 ಗುರುವಾರ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197ಮೇಷ ರಾಶಿ - ಆತ್ಮೀಯರೊಂದಿಗೆ ಹಣದ ವಿಷಯಗಳ ಬಗ್ಗೆ ಭಿನ್ನಭಿಪ್ರಾಯಗಳಿರುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಹೊಸ ಸಮಸ್ಯೆಗಳು ಉದ್ಭವಿಸುತ್ತವೆ. ಕೈಗೆತ್ತಿಕೊಂಡ ಕೆಲಸಗಳು ಬಹಳ ನಿಧಾನವಾಗಿ ಸಾಗುತ್ತವೆ. ವ್ಯರ್ಥ ಖರ್ಚುಗಳ ಬಗ್ಗೆ ಮರುಚಿಂತನೆ ಮಾಡುವುದು ಒಳ್ಳೆಯದು. ವ್ಯವಹಾರಗಳು ಮುಂದುವರಿಯದೆ ನಿರಾಶೆ ಉಂಟಾಗುತ್ತದೆ,ಗಮನಿಸಿ:-ಉದ್ಯೋಗಿಗಳು ಹೆಚ್ಚು ಶ್ರಮವಹಿಸಬೇಕು,ಪರಿಹಾರ:-ಗಣಪತಿ ದೇವರಿಗೆ ಗರಿಕೆ ಅರ್ಪಿಸಿ,...

ದರ್ಬೆ ಪ್ರಕರಣ: ಸಂತ್ರಸ್ತರ ಮನೆಗೆ ಎಸ್‌ಡಿಪಿಐ ಜಿಲ್ಲಾ ನಾಯಕರ ಭೇಟಿ

ಸುಳ್ಯ: ಪುತ್ತೂರಿನ ದರ್ಬೆ ಪ್ರಕರಣದಲ್ಲಿ ಹಲ್ಲೆಗೊಳಗಾದ ಸಂತ್ರಸ್ತರ ಕುಟುಂಬಕ್ಕೆ ಸಾಂತ್ವನ ಹೇಳುವ ಸಲುವಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ನೇತೃತ್ವದ ಜಿಲ್ಲಾ ನಾಯಕರ ತಂಡವು ಸುಳ್ಯದ ಮಂಡೆಕೋಲಿನಲ್ಲಿರುವ ಸಂತ್ರಸ್ತರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬದ...

ಸುಳ್ಯ ಪೊಲೀಸ್ ಠಾಣೆಯ ನೂತನ ಸಬ್‌ಇನ್ಸ್‌ಪೆಕ್ಟರ್ ಉದಯ ರವಿಗೆ ಆಟೋ ಚಾಲಕರ ಸಂಘದಿಂದ ಸ್ವಾಗತ

ಸುಳ್ಯ: ಸುಳ್ಯ ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿದ ಸಬ್‌ಇನ್ಸ್‌ಪೆಕ್ಟರ್ ಉದಯ ರವಿ ಅವರನ್ನು ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ (ರಿ.) ಬಿಎಂಎಸ್ ಸಂಯೋಜಿತ ಸುಳ್ಯ ದ.ಕ. ವತಿಯಿಂದ ಸ್ವಾಗತಿಸಿ ಅಭಿನಂದಿಸಲಾಯಿತು. ಸಂಘದ ಅಧ್ಯಕ್ಷ ಪ್ರಕಾಶ್ ಎಂ.ಎಸ್. ಅವರು ಸಬ್‌ಇನ್ಸ್‌ಪೆಕ್ಟರ್ ಉದಯ ರವಿ ಅವರಿಗೆ ಹೂಗುಚ್ಛ ನೀಡಿ ಶುಭಾಶಯ ಕೋರಿದರು. ಇದೇ ಸಂದರ್ಭದಲ್ಲಿ ಸಹೋದರತೆ...

ಕುಕ್ಕೆ ಸುಬ್ರಹ್ಮಣ್ಯದಲ್ಲಿ 24×7 ವೈದ್ಯರ ನೇಮಕಕ್ಕೆ 1 ಸಾವಿರ ಪತ್ರಗಳ ಚಳುವಳಿ

ಕುಕ್ಕೆ ಸುಬ್ರಹ್ಮಣ್ಯದಲ್ಲಿ 24x7 ತುರ್ತು ಚಿಕಿತ್ಸಾ ಘಟಕಕ್ಕೆ ಮಂಜೂರಾತಿ ದೊರೆತಿದ್ದರೂ ವೈದ್ಯಾಧಿಕಾರಿಗಳ ನೇಮಕವಾಗದಿರುವುದನ್ನು ಖಂಡಿಸಿ ಬುಧವಾರ ನಾಗರಿಕರು, ಭಕ್ತರು ಹಾಗೂ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ 1 ಸಾವಿರ ಪತ್ರಗಳ ಚಳವಳಿ ನಡೆಯಿತು. ತುರ್ತು ಚಿಕಿತ್ಸಾ ಘಟಕಕ್ಕೆ ಈಗಾಗಲೇ ಮಂಜೂರಾತಿ ದೊರೆತಿದ್ದು, ವೈದ್ಯಾಧಿಕಾರಿಗಳ ನೇಮಕಕ್ಕಾಗಿ ಹಲವು ಬಾರಿ ಮನವಿ ಹಾಗೂ ಹೋರಾಟ ನಡೆಸಲಾಗಿದೆ. ಆದರೂ ಬೇಡಿಕೆ ಈಡೇರದ...

ಪೆರಾಜೆ ಆಟೋ ರಿಕ್ಷಾ ಚಾಲಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಅಧ್ಯಕ್ಷರಾಗಿ ಚಂದ್ರಶೇಖರ, ಕಾರ್ಯದರ್ಶಿಯಾಗಿ ಪುರುಷೋತ್ತಮ, ಕೋಶಾಧಿಕಾರಿಯಾಗಿ ಅಶ್ರಫ್

ಪೆರಾಜೆ: ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ (ರಿ.) ಬಿಎಂಎಸ್ ಸಂಯೋಜಿತ ಸುಳ್ಯ ದಕ್ಷಿಣ ಕನ್ನಡ ಪೆರಾಜೆ ಘಟಕದ ವಾರ್ಷಿಕ ಮಹಾಸಭೆಯು ಪೆರಾಜೆ ಶ್ರೀ ಅನ್ನಪೂರ್ಣೇಶ್ವರಿ ಕಲಾ ಮಂದಿರದಲ್ಲಿ ನಡೆಯಿತು. ಘಟಕದ ಅಧ್ಯಕ್ಷ ಚಂದ್ರಶೇಖರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಕುಮಾರಿಯರಾದ ಅನನ್ಯ ಕೆ.ಪಿ., ಭಾಮಿನಿ ಕೆ.ಪಿ. ಹಾಗೂ ಕುಶಲ್ಯ ಪಿ.ಡಿ. ಅವರ ಪ್ರಾರ್ಥನೆಯೊಂದಿಗೆ...

3ನೇ ರಾಷ್ಟ್ರೀಯ ಲೋಕ ಅದಾಲತ್ ಸೆ. 19ಕ್ಕೆ ಮುಂದೂಡಿಕೆ | ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಕ್ಕೆ ಅವಕಾಶ

ಸುಳ್ಯ: ನ್ಯಾಯಾಲಯಗಳಲ್ಲಿ ಬಾಕಿ ಇರುವ ಹಾಗೂ ವ್ಯಾಜ್ಯ ಪೂರ್ವ ಹಂತದಲ್ಲಿರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಶೀಘ್ರವಾಗಿ ಇತ್ಯರ್ಥಪಡಿಸುವ ಉದ್ದೇಶದಿಂದ ನಡೆಯಲಿರುವ 3ನೇ ರಾಷ್ಟ್ರೀಯ ಲೋಕ ಅದಾಲತ್ ಅನ್ನು ಸೆಪ್ಟೆಂಬರ್ 19ಕ್ಕೆ ಮುಂದೂಡಲಾಗಿದೆ ಎಂದು ಸುಳ್ಯ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆ ದಮಯಂತಿ ಸೋಮಯ್ಯ ತಿಳಿಸಿದ್ದಾರೆ. ಸೆ. 2ರಂದು ಸುಳ್ಯ ನ್ಯಾಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ...
Loading posts...

All posts loaded

No more posts

error: Content is protected !!