ಹಾಲೆಮಜಲು: ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಮತ್ತು ಚೌತಿ ಪೂಜಾ ಕಾರ್ಯಕ್ರಮ

ಹಾಲೆಮಜಲು: ಆದರ್ಶ ಯೂತ್ ಕ್ಲಬ್ (ರಿ.) ಹಾಲೆಮಜಲು ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಮತ್ತು ಚೌತಿ ಪೂಜಾ ಕಾರ್ಯಕ್ರಮವು ಶ್ರೀ ವೆಂಕಟೇಶ್ವರ ಸಭಾಭವನ, ಹಾಲೆಮಜಲು ಇಲ್ಲಿ ವಿಜೃಂಭಣೆಯಿಂದ ನಡೆಯಿತು.

. . . . . . . . .

ಕಾರ್ಯಕ್ರಮವನ್ನು ಶ್ರೀ ವೆಂಕಪ್ಪ ಗೌಡ ಕಟ್ಟೆಕೋಡಿ, ಪ್ರಗತಿಪರ ಕೃಷಿಕರು, ಹಾಲೆಮಜಲು ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ಶ್ರೀ ಆಕರ್ಷ್ ಕುಳ್ಳಂಪಾಡಿ, ಗೌರವಾಧ್ಯಕ್ಷರು, ಆದರ್ಶ ಯೂತ್ ಕ್ಲಬ್ (ರಿ.) ವಹಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಕ್ಲಬ್‌ನ ಅಧ್ಯಕ್ಷರಾದ ಶ್ರೀ ಸುರೇಶ್ ಬಾಳಿಲ, ಕಾರ್ಯದರ್ಶಿ ಶ್ರೀ ಘೋಷಿತ್ ನರಿಯೂರು ಹಾಗೂ ಕಾರ್ಯಕ್ರಮದ ಸಂಯೋಜಕರಾದ ಶ್ರೀ ಲೋಹಿತ್ ಚೆಮ್ಮೂರು ಮತ್ತು ಶ್ರೀ ಪ್ರಶಾಂತ್ ಬಳ್ಳಡ್ಕ ಉಪಸ್ಥಿತರಿದ್ದರು.

. . . . . . .

ಕಾರ್ಯಕ್ರಮವನ್ನು ಘೋಷಿತ್ ನರಿಯೂರು ಸ್ವಾಗತಿಸಿ, ಪ್ರಶಾಂತ್ ಬಳ್ಳಡ್ಕ ವಂದಿಸಿದರು. ಶ್ರೀ ಲೋಕೇಶ್ ಕುಕ್ಕುಜೆ ಕಾರ್ಯಕ್ರಮ ನಿರೂಪಿಸಿದರು.

ನಂತರ ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆ ಹಾಗೂ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಹಾಗೆಯೇ ಪುರುಷರಿಗೆ, ಮಹಿಳೆಯರಿಗೆ, 50 ವರ್ಷ ಮೇಲ್ಪಟ್ಟ ಹಿರಿಯರಿಗೂ ಮತ್ತು ದಂಪತಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ನೃತ್ಯ ಸಾರಂಗ ಕಲಾ ಕುಟೀರ, ಗುತ್ತಿಗಾರು ಇದರ ಮಕ್ಕಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.

ಸಮಾರೋಪ ಸಮಾರಂಭ: ಸಮಾರೋಪ ಸಮಾರಂಭವು ಸಂಜೆ ಶ್ರೀ ಸುರೇಶ್ ಬಾಳಿಲ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಶ್ರೀ ಜಿ. ವಿ. ಆಂಜನೇಯ ರೆಡ್ಡಿ, ಪೊಲೀಸ್ ಉಪನಿರೀಕ್ಷಕರು, ಸುಬ್ರಹ್ಮಣ್ಯ ಠಾಣೆ ಹಾಗೂ ಶ್ರೀ ಸುಜನ್ ಗುಡ್ಡೆಮನೆ, ಲ್ಯಾನ್ಸ್ ಹವಿಲ್ದಾರ್, ಭಾರತೀಯ ಭೂಸೇನೆ ಉಪಸ್ಥಿತರಿದ್ದರು.

ಎಲ್ಲಾ ಸ್ಪರ್ಧೆಗಳ ಬಹುಮಾನ ವಿತರಣೆಯನ್ನು ಮುಖ್ಯ ಅತಿಥಿಗಳಾದ ಶ್ರೀ ಆಂಜನೇಯ ರೆಡ್ಡಿ ಹಾಗೂ ಶ್ರೀ ಸುಜನ್ ಗುಡ್ಡೆಮನೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಭಾರತೀಯ ಭೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀ ಸುಜನ್ ಗುಡ್ಡೆಮನೆ ದಂಪತಿಗಳನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ಮಾತನಾಡಿದ ಸುಬ್ರಹ್ಮಣ್ಯ ಠಾಣೆಯ ಪೊಲೀಸ್ ಉಪನಿರೀಕ್ಷಕ ಆಂಜನೇಯ ರೆಡ್ಡಿ ಅವರು, “ಊರಿನ ಸೈನಿಕರನ್ನು ಗುರುತಿಸಿ ಅವರನ್ನು ಸನ್ಮಾನಿಸಿರುವುದು ನಿಜಕ್ಕೂ ಅಭಿನಂದನೀಯ. ದಕ್ಷಿಣ ಕನ್ನಡದ ಜನರು ವಿದ್ಯಾವಂತರೂ ಬುದ್ಧಿವಂತರೂ ಆಗಿದ್ದೀರಿ. ನೀವು ರೈತರ ಮಕ್ಕಳು ಸರ್ಕಾರಿ ಉದ್ಯೋಗಗಳನ್ನು ಪಡೆದುಕೊಳ್ಳಬೇಕು. ಶಿಕ್ಷಣ, ಉದ್ಯೋಗ ಮತ್ತು ಕೌಟುಂಬಿಕ ಜೀವನದಲ್ಲಿ ಉತ್ತಮ ಸಂಸ್ಕಾರವನ್ನು ಬೆಳೆಸಿಕೊಂಡು ನಿಯಮಬದ್ಧವಾಗಿ ಜೀವನ ನಡೆಸಬೇಕು” ಎಂದು ಯುವಕರಿಗೆ ಸಲಹೆ ನೀಡಿದರು.

ಅಧ್ಯಕ್ಷರಾದ ಸುರೇಶ್ ಬಾಳಿಲ ಮಾತನಾಡಿ, ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲರನ್ನು ವಂದಿಸಿ, ಮುಂದಿನ ಕಾರ್ಯಕ್ರಮಗಳಿಗೆ ಸಹಕಾರ ಕೋರಿದರು. ಯೂತ್ ಕ್ಲಬ್ ನ ಕಾರ್ಯದರ್ಶಿಗಳಾದ ಘೋಷಿತ್ ನರಿಯೂರು ಹಾಗೂ ಕಾರ್ಯಕ್ರಮ ಸಂಯೋಜಕರಾದ ಪ್ರಶಾಂತ್ ಬಳ್ಳಡ್ಕ ಉಪಸ್ಥಿತರಿದ್ದರು. ಲೋಹಿತ್ ಚೆಮ್ಮೂರು ವಂದಿಸಿ, ಲೋಕೇಶ್ ಕುಕ್ಕುಜೆ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading