ಸಂಪಾಜೆ ಪಯಸ್ವಿನಿ ಪ್ರಾ ಕೃ ಪ ಸಹಕಾರಿ ಸಂಘಕ್ಕೆ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ

ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ತನ್ನ ಸಮಗ್ರ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.ಅಪೆಕ್ಸ್ ಬ್ಯಾಂಕ್ ನಿರ್ದೇಶಕ, ಕೆಡಿಸಿಸಿ ಬ್ಯಾಂಕ್ ಅದ್ಯಕ್ಷರಾದ ಶ್ರೀ ಕೊಡಂದೇರ ಬಾಂಡ್ ಗಣಪತಿ ರವರು ಇಂದು ಮಡಿಕೇರಿಯಲ್ಲಿ ಸಂಘದ ಅದ್ಯಕ್ಷ ಯನ್.ಸಿ.ಅನಂತ್ ರವರಿಗೆ ಪ್ರಶಸ್ತಿ ಪತ್ರ ಮತ್ತು ನಗದು ಪುರಸ್ಕಾರ ನೀಡಿ ಗೌರವಿಸಿದರು.

ಇದೇ ಸಂದರ್ಭದಲ್ಲಿ ಕೆಡಿಸಿಸಿ ಬ್ಯಾಂಕ್ ನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದ್ದು,ಇದೇ ಮೊದಲ ಬಾರಿಗೆ ಅತ್ಯಧಿಕ‌ ಶೇ.20 ರಷ್ಟು ಡಿವಿಡೆಂಡ್ ಘೋಷಣೆ ಮಾಡಿರುವ ಸಮರ್ಥ, ದಕ್ಷ ಅದ್ಯಕ್ಷರಾದ ಶ್ರೀ. ಬಾಂಡ್ ಗಣಪತಿಯವರು ಮತ್ತು ಆಡಳಿತ ಮಂಡಳಿಯವರಿಗೆ ಪಯಸ್ವಿನಿ ಸೊಸೈಟಿ ವತಿಯಿಂದ ಧನ್ಯವಾದ ಸಲ್ಲಿಸಲಾಯಿತು.
ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ. ಬಿ.ಕೆ ಆನಂದ,ನಿರ್ದೇಶಕರಾದ ಶ್ರೀ. ಪುಂಡರೀಕ ಅರಂಬೂರು,ಶ್ರೀ. ಕೊನ್ನಪ್ಪ ಕಾಸ್ಪಾಡಿ ಮತ್ತು ಚೆಂಬು ಗ್ರಾ ಪಂ ಮಾಜಿ ಸದಸ್ಯ ಗಿರೀಶ್ ಹೊಸೂರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading