ಸಂಘ ಶತಾಬ್ದಿ ಅಂಗವಾಗಿ ಭಾರತ್ ಮಾತಾ ಪೂಜನಾ ಕಾರ್ಯಕ್ರಮ – ನೂರು ದೀಪಗಳ ಬೆಳಕಿನಲ್ಲಿ ಬೆಳಗಿದ ಭಾರತ ಮಾತೆ – ಜಗತ್ತಿನಲ್ಲಿ ಶಾಂತಿ ನೆಲೆಸಬೇಕಾದರೇ ಭಾರತ ಬಲಿಷ್ಠವಾಗಬೇಕು : ಸುಭಾಶ್ಚಂದ್ರ ಕಳಂಜ

ಜಗತ್ತಿನಲ್ಲಿ ‌ಶಾಂತಿ ನೆಲೆಸಬೇಕಾದರೇ ಭಾರತ ಬಲಿಷ್ಠವಾಗಬೇಕು. ಈ ಗುರಿಯೆಡೆಗೆ ಸಂಘ ನಿರಂತರ ನೂರು ವರ್ಷಗಳಿಂದ ಕೆಲಸ ಮಾಡುತ್ತಾ ಬಂದಿದೆ. ಇನ್ನಷ್ಟೂ ವೇಗವಾಗಿ ಈ ಕಾರ್ಯ ಮುಂದುವರಿಯಬೇಕಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ತಾಲೂಕು ಕಾರ್ಯವಾಹ ಸುಭಾಶ್ಚಂದ್ರ ಕಳಂಜ ಹೇಳಿದರು.

. . . . . . . . .

ಅವರು ಸೆ.27 ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖಾ ಸಪ್ತಾಹದ ಅಂಗವಾಗಿ ನಡೆದ ಭಾರತ ಮಾತಾ ಪೂಜನಾ’ ಕಾರ್ಯಕ್ರಮದಲ್ಲಿ ಮಾತನಾಡಿದರು.‌

. . . . . . .

ಹಿರಿಯ ಸ್ವಯಂಸೇವಕರಾದ ಬಿ.ಕೆ.ಬೆಳ್ಯಪ್ಪ ಗೌಡ ಕಡ್ತಲ್ ಕಜೆ ಮುಖ್ಯ ಅತಿಥಿಯಾಗಿದ್ದರು.‌

ಸಂಘದ ಶತಾಬ್ದಿ ಸಂಭ್ರಮದ ಹಿನ್ನೆಲೆಯಲ್ಲಿ ರಾಷ್ಟ್ರ ಕಾರ್ಯ ಹಾಗೂ ಸಮಾಜ ಪರಿವರ್ತನೆಯ ಕಾರ್ಯಗಳನ್ನು ನಡೆಸಲಾಗುತ್ತಿದ್ದು, ಹೊಸ ಸ್ವಯಂಸೇವಕರಿಗೆ ಸಂಘದ ಪರಿಚಯ ಹಾಗೂ ಮುಂದಿನ ಕಾರ್ಯಪದ್ಧತಿಯ ಅರಿವು ಮೂಡಿಸುವ ಉದ್ದೇಶದಿಂದ ‘ಚಾವಡಿ ಶಾಖೆ’ಗಳ ಮೂಲಕ ಒಂಬತ್ತು ದಿನಗಳ ಶಾಖಾ ಸಪ್ತಾಹವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ 300 ಕ್ಕೂ ಮಿಕ್ಕಿ ಸ್ವಯಂ ಸೇವಕರು ಭಾಗವಹಿಸಿದ್ದು 100 ದೀಪಗಳ ಪ್ರಜ್ವಲನೆ ನೆರವೇರಿತು. ವೈಯಕ್ತಿಕ ಗೀತೆ, ಅಮೃತವಚನ ಹಾಗೂ ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading