ಸುಬ್ರಹ್ಮಣ್ಯ : ಮಾತಾ ಅಮೃತಾನಂದಮಯಿ ಹುಟ್ಟು ಹಬ್ಬದ ಪ್ರಯುಕ್ತ ಸ್ವಚ್ಛತಾ ಅಭಿಯಾನ

ಸುಬ್ರಹ್ಮಣ್ಯ ಸೆಪ್ಟೆಂಬರ್ 27 : ಮಾತಾ ಅಮೃತಾನಂದಮಾಯಿ ಅವರ 73ನೇ ಹುಟ್ಟುಹಬ್ಬದ ಪ್ರಯುಕ್ತ ವಿಶ್ವ ಸೇವಾ ದಿನದ ಅಂಗವಾಗಿ ಇಂದು ರವಿವಾರ ಕುಕ್ಕೆ ಸುಬ್ರಹ್ಮಣ್ಯದ ಪರಿಸರದಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಯಿತು.

. . . . . . . . .

ಕುಕ್ಕೆ ಸುಬ್ರಹ್ಮಣ್ಯದ ಅನುಗ್ರಹ ಲಾಡ್ಜ್ ಎದುರಿನಿಂದ ದೇವರಗದ್ದೆಗೆ ಹೋಗುವ ಮಾರ್ಗದ ಇಕ್ಕೆಲಗಳಲ್ಲಿ ಇದ್ದಂತಹ ಕಸ ಕಡ್ಡಿಗಳು, ತ್ಯಾಜ್ಯ ವಸ್ತುಗಳು, ಪ್ಲಾಸ್ಟಿಕ್ ಬಾಟಲ್ ಗಳು, ಹಾಗೂ ಇನ್ನಿತರ ಕೊಚ್ಚೆ ವಸ್ತುಗಳನ್ನ ಸಂಗ್ರಹಿಸಿ ತ್ಯಾಜ್ಯ ಘಟಕಕ್ಕೆ ಕೊಂಡೊಯ್ಯಲಾಯಿತು. ಸ್ವಚ್ಛತಾ ಕಾರ್ಯಕ್ರಮದಲ್ಲಿ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ 545ನೇ ವಾರದ ಸ್ವಚ್ಛತಾ ಕಾರ್ಯಕ್ರಮ ಕೂಡ ಇದರೊಂದಿಗೆ ನಡೆಯಿತು. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನವರು ಕೂಡ ಈ ಸಂದರ್ಭದಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

. . . . . . .

ಇದೇ ಸಂದರ್ಭದಲ್ಲಿ ಚಂದ್ರಶೇಖರ ನಾಯರ್ ಅವರು ಮಾತನಾಡುತ್ತಾ “ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಪರಿಸರವನ್ನು ಸ್ವಚ್ಛತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯು ಹೌದು, ಎಲ್ಲಿ ಸ್ವಚ್ಛತೆ ಇದೆಯೋ ಅಲ್ಲಿ ದೇವರ ಸಾನಿಧ್ಯ ಇದೆ” ಎಂದರು.

ಪ್ರಭಾಕರ ಪಡ್ರೆ, ದುಗ್ಗಪ್ಪ ಅಗ್ರಹಾರ, ಮೋಹನ್ ದಾಸ್ ರೈ ಹಾಗೂ ಡಾ.ರವಿ ಕಕ್ಕೆಪದವು ಅವರು ಮಾತನಾಡಿ “ಕುಕ್ಕೆ ಕ್ಷೇತ್ರವನ್ನು ಸ್ವಚ್ಛತೆಯಿಂದ ಇಡುವಂತೆ ನಾವೆಲ್ಲರೂ ಸಂಘ ಸಂಸ್ಥೆಗಳೊಂದಿಗೆ ಸೇರಿ ಪ್ರತಿ ರವಿವಾರ ಅಥವಾ ಇನ್ನಿತರ ಬಿಡುವು ದಿನಗಳಲ್ಲಿ ಕಾರ್ಯವನ್ನು ಕೈಗೊಳ್ಳೋಣ” ಎಂದರು.

ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತಾ ಅಮೃತಾನಂದಮಯಿ ಸ್ವಾಮಿ ಸ್ವಯಂಸೇವಕರು, ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ ಸ್ವಯಂಸೇವಕರು ಹಾಗೂ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಡಾ. ರವಿ ಕಕ್ಕೆಪದವು, ಚಂದ್ರಶೇಖರ ನಾಯರ್, ದುಗ್ಗಪ್ಪ ಅಗ್ರಹಾರ, ಪ್ರಭಾಕರ ಪಡ್ರೆ, ಮೋಹನ್ ದಾಸ್ ರೈ, ಗಣೇಶ್, ಪಂಚಾಯತ್ ಕಾರ್ಯದರ್ಶಿ ಮೋನಪ್ಪ ಡಿ ಹಾಗೂ ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading