ಅಮೇರಿಕನ್ ವಿಸ್‌ಡಮ್ ಯೂನಿವರ್ಸಿಟಿಯಿಂದ ಮುಗುಪ್ಪು ಕೂಸಪ್ಪ ಗೌಡರಿಗೆ ಗೌರವ ಡಾಕ್ಟರೇಟ್

ಬೆಳ್ಳಾರೆ ಕಾಮಧೇನು ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಮುಪ್ಪೇರ್ಯ ಗ್ರಾಮದ ಮುಗುಪ್ಪ ಕೂಸಪ್ಪ ಗೌಡರಿಗೆ ಅಮೇರಿಕ ವಿಸ್ ಡಮ್ ಪೀಸ್ ಯುನಿವರ್ಸಿಟಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಉತ್ತಮ ಸಮಾಜ ಸೇವೆಗಾಗಿ ಇವರಿಗೆ ಸೆ.27 ರಂದು ಹೊಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಲವು ಜನ ಗಣ್ಯರ ಸಮ್ಮುಖದಲ್ಲಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.

. . . . . . . . .

ಈ ಸಂದರ್ಭದಲ್ಲಿ ತಿಲೋತ್ತಮ ಕೊಡಪಾಲ, ಹರ್ಷಿತ್ ಕೊಡಪಾಲ, ಪೂರ್ಣಿಮಾ ಕೊಡಪಾಲ, ಸಮನ್ವಿತ, ಚಾರ್ವಿತ, ಕೌಶಿಕ್ ಕೊಡಪಾಲ, ವಿನೋದ್ ಕುಮಾರಿ, ಲೊಕ್ಷಿನ್, ಪ್ರಸನ್ನ ಮಡ್ತಿಲ ಮತ್ತು ಮನೆಯವರು ಪದ್ಮಯ್ಯ ಗೌಡ ಮತ್ತು ಮನೆಯವರು ಉಪಸ್ಥಿತರಿದ್ದರು.

. . . . . . .

ಕೂಸಪ್ಪ ಗೌಡರು ಸಹಕಾರ ಭಾರತೀಯ ಜಿಲ್ಲಾ ಕಾರ್ಯದರ್ಶಿಯಾಗಿದ್ದು, ಬಿಜೆಪಿಯ ತಾಲೂಕು ರೈತ ಮೋರ್ಚಾದ ಅಧ್ಯಕ್ಷರಾಗಿ, ಜಿಲ್ಲಾ ಕಾರ್ಯದರ್ಶಿಯಾಗಿ, ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೂ ಧಾರ್ಮಿಕ, ಶೈಕ್ಷಣಿಕ ಕ್ಷೇತ್ರ ಅಲ್ಲದೆ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ತೊಡಗಿಕೊಂಡಿರುವ ಇವರು ಪ್ರಸ್ತುತ ಬೆಳ್ಳಾರೆ ಕಾಮಧೇನು ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಂಜ ಲಯನ್ಸ್ ಕ್ಲಬ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಇವರು ಕಳೆದ 16 ವರ್ಷಗಳಿಂದ ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಸ್ವ ಸಹಾಯ ಸಂಘಗಳ ತಾಲೂಕು ಒಕ್ಕೂಟದ ಪದಾಧಿಕಾರಿಯಾಗಿ, ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷರಾಗಿ ತಾಲೂಕು ಒಕ್ಕೂಟದ ಸದಸ್ಯರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading